ಅರವಿಂದ ಲಿಂಬಾವಳಿ ಶಿಕ್ಷಣ ರಂಗದಲ್ಲೇ ಹೋರಾಟ ಮಾಡುತ್ತಲೇ ಬೆಳೆದ ಯುವ ನಾಯಕರು. ಶಾಸಕರಾದ ಮೇಲೆ ಮಹದೇವಪುರದಲ್ಲಿ ಶಿಕ್ಷಣ ಕ್ರಾಂತಿಗೆ ಅವರು ಮಾಡಿದ ಯತ್ನಗಳನ್ನು ಕಣ್ಣಾರೆ ಕಾಣಬಹುದು.
ವರ್ತೂರು ಮತ್ತು ಕಾಡುಗೋಡಿ – ಒಟ್ಟು ಎರಡು ಪದವಿ ಕಾಲೇಜುಗಳು ಕ್ಷೇತ್ರಕ್ಕೆ ಬಂದಿವೆ. ಬೆಂಗಳೂರಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಎಂದರೆ ಎಸ್ ಜೆ ಪಾಲಿಟೆಕ್ನಿಕ್ ಮಾತ್ರ ಎಂದೇ ಮಾತಿರುವಾಗ ಕಾಡುಗೋಡಿ ವಾರ್ಡಿನ ಚನ್ನಸಂದ್ರ, ಹಗದೂರು ವಾರ್ಡಿನ ಇಮ್ಮಡಿಹಳ್ಳಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕೂಡಾ ಸ್ಥಾಪನೆಯಾಗಿವೆ. ಎಲ್ಲದಕ್ಕೂ ನಿವೇಶನಗಳೂ ಇವೆ; ಕಟ್ಟಡಗಳ ನಿರ್ಮಾಣ ಆರಂಭವಾಗಬೇಕಿದೆ. ರಾಜ್ಯದಲ್ಲೆಲ್ಲೂ ಹೊಸ ಪ್ರೌಢಶಾಲೆ ತೆರೆಯುವುದೇ ಕಷ್ಟ ಎಂಬ ಸನ್ನಿವೇಶದಲ್ಲೂ ಅರವಿಂದ ಲಿಂಬಾವಳಿ ಹೋರಾಟ ಮಾಡಿ ದೊಡ್ಡಬನಹಳ್ಳಿಗೆ ಪ್ರೌಢಶಾಲೆ ತಂದಿದ್ದಾರೆ. ಮಾರತ್ತಹಳ್ಳಿಯಲ್ಲಿ ಉರ್ದು ಶಾಲೆಗೆ ೨೦ ಗುಂಟೆ ನಿವೇಶನ ಕಾಯ್ದಿರಿಸಿದೆ. ದೊಡ್ಡ ನೆಕ್ಕುಂದಿ, ಕಾಡುಗೋಡಿ, ಜ್ಯೋತಿಪುರ ಹಾಗೂ ಕನ್ನಮಂಗಲಗಳ ಪ್ರೌಢಶಾಲೆಗಳಲ್ಲಿ ಆಂಗ್ಲಮಾಧ್ಯಮ ತರಗತಿಗಳು ಆರಂಭವಾಗಿವೆ. ಕ್ಷೇತ್ರದ ಹಲವು ಶಾಲೆಗಳ ಜಾಗವೇ ಒತ್ತುವರಿಯಾಗಿತ್ತು. ಅವೆಲ್ಲವೂ ಈಗ ನಿರ್ದಾಕ್ಷಿಣ್ಯವಾಗಿ ಸರ್ಕಾರದ ವಶಕ್ಕೆ ಬಂದಿವೆ. ಎಸ್ಸಿ/ಎಸ್ಟಿ ಹಾಸ್ಟೆಲ್ಗಳೂ ಬಂದಿವೆ.
ಮಹದೇವಪುರದಲ್ಲಿ ಹಲವಾರು ಅಂತಾರಾಷ್ಟ್ರೀಯ ಸ್ತರದ ಶಿಕ್ಷಣ ಸಂಸ್ಥೆಗಳಿವೆ. ಹಾಗೆಯೇ ಹಲವು ಕೊರತೆಗಳಿರುವ ಶಾಲೆಗಳೂ ಇವೆ. ಪ್ರಾಥಮಿಕ ಶಾಲೆಗಳಲ್ಲಿ ಕೆಲವು ವಿಷಯಗಳಲ್ಲಿ ಶಿಕ್ಷಕರ ಕೊರತೆ ಇರುವುದನ್ನು ಮನಗಂಡು ಅರವಿಂದ ಲಿಂಬಾವಳಿಯವರು ವಾಗ್ದೇವಿ ಶಾಲೆಯ ಮುಖ್ಯಸ್ಥ ಶ್ರೀ ಹರೀಶ್ ನೇತೃತ್ವದಲ್ಲಿ ರಾಜ್ಯದಲ್ಲೇ ವಿಶಿಷ್ಟವಾದ `ಶಿಕ್ಷಣ ಕಾರ್ಯಪಡೆ’ಯನ್ನೇ ಸ್ಥಾಪಿಸಿದ್ದು ಇನ್ನೊಂದು ರೋಚಕ ಕಥೆ. ಇದಕ್ಕೆ ಒದಗಿದ್ದು ಕೇವಲ ಸಾರ್ವಜನಿಕರ ದೇಣಿಗೆಯ ಹಣ ಮತ್ತು ಸ್ವಯಂಸೇವಾ ಮನೋಭಾವದ ಯುವ ಪಡೆಯ ಕಲಿಸುವ ಹುಚ್ಚು! ವಿದ್ಯಾರ್ಥಿ ನಾಯಕನಾಗಿ ಪಡೆದ ಅನುಭವವನ್ನೆಲ್ಲ ಕ್ಷೇತ್ರದ ಶಿಕ್ಷಣ ಮಟ್ಟ ಹೆಚ್ಚಿಸಲು ಅರವಿಂದ ಲಿಂಬಾವಳಿ ಎರೆದಿದ್ದಾರೆ.
ಮಹದೇವಪುರದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕಾಗಿ ಗುಂಜೂರು ಪಾಳ್ಯದಲ್ಲಿ ೨೭ ಎಕರೆಗೂ ಹೆಚ್ಚು ವ್ಯಾಪ್ತಿಯ ವಿಶಾಲ ಜಾಗವನ್ನೀಗ ಗುರುತಿಸಲಾಗಿದೆ. ಸ್ಥಳೀಯ ವಿದ್ಯಾರ್ಥಿಗಳಿಗಾಗಿಯೂ ಕ್ರೀಡಾಂಗಣಗಳ ನಿರ್ಮಾಣ ಯೋಜನೆ ನಡೆದಿದೆ. ಕಲಿಕೆಯೊಂದಿಗೆ ಆಟೋಟವೂ ಇರಬೇಕು, ಉಳಿಯಲು ಒಳ್ಳೆಯ ವಸತಿ ವ್ಯವಸ್ಥೆಯೂ ಇರಬೇಕು ಎಂಬುದು ಅರವಿಂದ ಲಿಂಬಾವಳಿಯವರ ಹಂಬಲ.
ಶಿಕ್ಷಣರಂಗದ ಹೋರಾಟದ ಬೆಂಕಿಯಲ್ಲಿ ಬೆಳೆದು ಬಂದಮೇಲೆ ಅರವಿಂದ ಲಿಂಬಾವಳಿ ಹೀಗೆಲ್ಲ ಯೋಚಿಸಿ ಕಾರ್ಯಗತಗೊಳಿಸುವುದು ತೀರ ಸಹಜ.
ಅಜೀಂ ಪ್ರೇಮ್ಜಿ ಪ್ರತಿಷ್ಠಾನವು ಕೊಡತಿ ಗ್ರಾಮ ಪಂಚಾಯತಿಯ ಹಲವು ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಅಭಿವೃದ್ಧಿಗಾಗಿ ಹತ್ತಾರು ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಅರವಿಂದ ಲಿಂಬಾವಳಿಯವರ ಶಿಕ್ಷಣಸೇವೆಗಳಿಗೆ ಕೈಗೂಡಿಸಿದ್ದು ವಿಶೇಷ. ಶಿಕ್ಷಕರಿಗೆ ಇಂಗ್ಲಿಷ್, ಕನ್ನಡ ಮತ್ತು ಗಣಿತ ವಿಷಯಗಳ ತರಬೇತಿ, ಮುಖ್ಯ ಶಿಕ್ಷಕರ ಸಾಮರ್ಥ್ಯವೃದ್ಧಿ, ಆರೋಗ್ಯ ಸಮೀಕ್ಷೆ, ಮೂಲಸೌಕರ್ಯಗಳು – ಹೀಗೆ ಪ್ರತಿಷ್ಠಾನವು ಹಲವು ಆಯಾಮಗಳಲ್ಲಿ ಸೇವೆ ಸಲ್ಲಿಸಿದೆ. ಈ ಶಾಲೆಗಳಲ್ಲಿ ಒಂದು ಸಂಪೂರ್ಣ ಕ್ರಿಯಾ ಯೋಜನೆಯನ್ನು ಈಗ ಜಾರಿಗೊಳಿಸಲಾಗುತ್ತಿದೆ.
ಶಿಕ್ಷಣ ಅಭಿಯಾನದ ಅಲೆ
- ಕಾಡುಗೋಡಿಯಲ್ಲಿ ಪ್ರಥಮ ದರ್ಜೆ ಕಾಲೇಜು (೨೦೦೯-೧೦)
- ವರ್ತೂರಿನಲ್ಲಿ ಪ್ರಥಮ ದರ್ಜೆ ಕಾಲೇಜು (೨೦೦೯-೧೦)
- ಇಮ್ಮಡಿಹಳ್ಳಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ (೨೦೦೯-೧೦)
- ಚನ್ನಸಂದ್ರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ (೨೦೦೯-೧೦)
- ದೊಡ್ಡಬನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ (೨೦೧೦-೧೧)
- ಕನ್ನಮಂಗಲ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಣ ಕಾರ್ಯಪಡೆಯ ಮೂಲಕ ಕ್ರೀಡಾ ಪರಿಕರಗಳನ್ನು ಒದಗಿಸಲಾಗಿದೆ.
- ದೊಡ್ಡ ನೆಕ್ಕುಂದಿ, ಕಾಡುಗೋಡಿ, ಕನ್ನಮಂಗಲ, ಜ್ಯೋತಿಪುರಗಳ ಸರ್ಕಾರಿ ಪ್ರೌಢಶಾಲೆಗಳಲ್ಲಿ ೨೦೧೦-೧೧ರ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮ ವಿಭಾಗ ಆರಂಭ
- ಬಿಬಿಎಂಪಿ, ಸರ್ವಶಿಕ್ಷಾ ಅಭಿಯಾನ, ಬಿಡಿಎ, ಶಿಕ್ಷಣ ಕಾರ್ಯಪಡೆ – ಇವುಗಳಡಿಯಲ್ಲಿ ಒಟ್ಟು ೧೨೦ಕ್ಕೂ ಹೆಚ್ಚು ಶಾಲಾಕೊಠಡಿಗಳನ್ನು ಕಟ್ಟಲಾಗಿದೆ.
ಮಹದೇವಪುರದಲ್ಲಿ ಶಿಕ್ಷಣ ರಂಗದ ಕೆಲಸಗಳಿಗಾಗಿ ಅರವಿಂದ ಲಿಂಬಾವಳಿಯವರು ವಾಗ್ದೇವಿ ಶಾಲೆಯ ಮುಖ್ಯಸ್ಥ ಶ್ರೀ ಹರೀಶ್ ನೇತೃತ್ವದಲ್ಲಿ ಒಂದು ಶಿಕ್ಷಣ ಕಾರ್ಯಪಡೆಯನ್ನೇ ರಚಿಸಿದ್ದಾರೆ! ಈ ಪಡೆಯ ಸ್ವಯಂಸೇವಾ ಕಾರ್ಯಕರ್ತರು ಅಗತ್ಯ ಇರುವ ಕಡೆಗಳಿಗೆ ಹೊರಗಿನಿಂದ ಶಿಕ್ಷಕರನ್ನು ಕಳಿಸಿಕೊಟ್ಟು ಪಾಠದ ವ್ಯವಸ್ಥೆ ಮಾಡುತ್ತಾರೆ. ರಾಜ್ಯದಲ್ಲೇ ಇದೊಂದು ವಿನೂತನ ಪ್ರಯೋಗ.
Arvind Limbavali is a young leader who evolved fighting against rickety Education system in the state. One can see the efforts he undertook for the education revolution after he became the MLA of Mahadevapura.
Two new Government First colleges have been started in Varturu and Kadugodi.
People think that SJP is the only Government polytechnic in Bangalore. However Government polytechnics have been established in the Channasandra in Kadugodi ward and immadihalli in Hagaduru ward. The construction of the building is in progress, which provides hostel facility too. Even at the time when it was nearly impossible to start a high school in Karnataka, Limbavali fought for the high school and now Doddabanahalli has it. 20 gunta land is reserved for Urdu school in Marath Halli. English medium has been started in the Government high schools of Doddanekkundi, Kadugodi, Jyotipura and Kannamangala . Many of the school properties had been encroached in the constituency. Now all the data has been collected and unauthorized encroachment has been vacated. Mahadevapura now has SC/ST hostels too.
Mahadevapura has many state-of-art international schools at one end; schools which lack even the basic facilities at the other end. When Limbavali learnt that a few primary schools lacked teachers for a couple of subjects, he immediately formed an Education task force headed by Shri Harish, chairman, Vaagdevi schools which is another inspiring story. This task force made use of the public fund and consisted of young and passionate people who volunteered to teach. Arvind Limbavali has poured in all his experience gained as a student leader to enhance the quality of the education system in the constituency.
A wide area of more than 27 acres has been identified in Gunjuru Palya for an international sports stadium in Mahadevapura. Plans have also been on anvil to build an international training centre for the local sportsmen. Arvind Limbavali aspires that sports should also be a part of studies and good hostels need to be built for students.
It is but natural for Arvind Limbavali who evolved from the blaze of student movements to envisage and execute in this style.
Azim Premji Foundation has joined hands with Arvind Limbavali’s cause of education by taking up various activities in many Government and private schools of Kodati village panchayat. The foundation has served in various dimensions like training to teachers in English, Kannada and mathematics subjects, capacity building for heads of educational institutions, health surveys, basic infrastructure etc. A comprehensive action plan is being implemented in these schools.
Wave of Education campaign
- Government First Grade College in Kadugodi (2009-10);
- Government First Grade College in Varturu (2009-10);
- Government polytechnic in Immadihalli (2009=10)
- Government polytechnic in Channasandra (2009-10)
- Government high school in Doddabanahalli (2010-11);
- Sports materials to Kannamangala Government school through Education task force.
- Introduced English medium in Doddanekkundi, Kadugodi, Kannamangala and Jyotipura Government high schools from 2010-11 academic year
- Under SSA and BBMP , BDA and Education task force grants more than 120 classrooms are constructed
Arvind Limbavali has formed an Education Task Force with like-minded people, headed by Shri Harish, chairman, Vaagdevi group of institutions to tackle the issues of education sector in Mahadevapura. Task force deputes external teachers to such schools, where teachers are in shortfall. It is a unique initiative in the state.
ಸಾಧನೆಗಳು ೨೦೦೮-೧೩ – Achievements 2008-13
- ಸಾಧನೆಯ ಹಾದಿಯಲ್ಲಿ ಶಿಕ್ಷಣ ಕ್ಷೇತ್ರ – Education sector: A spectacular achievement - ಕರ್ನಾಟಕ ರಾಜ್ಯವು ಹಲವು ದಶಕಗಳಿಂದಲೂ ದೇಶದಲ್ಲೇ ಮುಂಚೂಣಿಯಲ್ಲಿರುವ ಉನ್ನತ ಶಿಕ್ಷಣ ಕೇಂದ್ರವಾಗಿದೆ. ಅದರಲ್ಲೂ ಎಂಬತ್ತರ ದಶಕದಿಂದೀಚೆಗೆ ಕರ್ನಾಟಕದಲ್ಲಿ ನೂರಾರು ಕಾಲೇಜುಗಳು ಸ್ಥಾಪನೆಗೊಂಡಿವೆ. ೨೦೦೮ರ ಹೊತ್ತಿಗೆ ಶಿಕ್ಷಣ ರಂಗವು ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿತ್ತು. ದೇಶದ ಮಾನವ ಸಂಪನ್ಮೂಲವನ್ನು ಸಮೃದ್ಧಗೊಳಿಸುವ ಈ ಕಾಯಕದಲ್ಲಿ ಅರವಿಂದ ಲಿಂಬಾವಳಿಯವರು ಗರಿಷ್ಠ ಪ್ರಮಾಣದ ರಚನಾತ್ಮಕ, ಗುಣಾತ್ಮಕ ಬದಲಾವಣೆಗಳನ್ನು ತಂದರು. ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲಾವಧಿಯಲ್ಲಿ ತಳೆದ ನಿರ್ಣಯಗಳು, ರೂಪಿಸಿದ ಕಾರ್ಯಕ್ರಮಗಳು, ಜಾರಿಗೆ ತಂದ ವಿನೂತನ ಉಪಕ್ರಮಗಳೇ ಅವರ ಯಶಸ್ಸಿಗೆ ನಿದರ್ಶನಗಳಾಗಿವೆ. ಕಾಲೇಜು… Continue Reading
- ಶಿಬಿರ,ಮೇಳ,ಉತ್ಸವಗಳ ಸರಮಾಲೆ – A continuous series of Fairs and Festivals - ಮಹದೇವಪುರ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹತ್ತು ಹಲವು ಮೇಳಗಳು ನಡೆದಿವೆ. ನಾಡಿನ ಮಹಾಪುರುಷರ ಜಯಂತಿಗಳನ್ನೂ ವಿಜೃಂಭಣೆಯಿಂದ ಆಚರಿಸಲಾಗಿದೆ.ಯುಗಾದಿ ಹಬ್ಬವೇ ಮಹದೇವಪುರ ಮೇಳವಾಗಿ ರೂಪಾಂತರಗೊಂಡು ಸಾವಿರಾರು ಕುಟುಂಬಗಳನ್ನು ಸೆಳೆದಿದೆ.ಕ್ಷೇತ್ರದಲ್ಲಿ ಎರಡು ಉದ್ಯೋಗ ಮೇಳಗಳು ನಡೆದವು. ಇಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಮೊದಲ ಮೇಳದಲ್ಲಿ ೭೦೦ ಜನರಿಗೆ ಉದ್ಯೋಗ ದೊರಕಿದರೆ, ನ್ಯೂ ಹಾರಿಜಾನ್ ಕಾಲೇಜು ಕ್ಯಾಂಪಸ್ನಲ್ಲಿ ನಡೆದ ಎರಡನೇ ಮೇಳದಲ್ಲಿ ೮೧೦ ಜನರಿಗೆ ಕೆಲಸ ಸಿಕ್ಕಿತು.ಮೊದಲ ವರ್ಷ ಮಹದೇವಪುರದಲ್ಲಿ ಆಚರಿಸಿದ ಯುಗಾದಿ ಉತ್ಸವವು ಮರುವರ್ಷದಿಂದ `ಮಹದೇವಪುರ ಉತ್ಸವ’ವಾಗಿ… Continue Reading
- ಧಾರ್ಮಿಕತೆ, ಸಾಮರಸ್ಯದ ತಂಗಾಳಿ – A gentle breeze of religious harmony - ಸ್ವಾಮಿ ವಿವೇಕಾನಂದ, ವೇಮನ, ಕೆಂಪೇಗೌಡ, ಬಸವೇಶ್ವರ, ಕನಕದಾಸರು, ಡಾ|| ಬಿ.ಆರ್. ಆಂಬೇಡ್ಕರ್, ಬಾಬು ಜಗಜೀವನರಾಂ, ದ್ರೌಪದಮ್ಮ, ಸಿದ್ಧರಾಮೇಶ್ವರರು, ಸ್ವಾಮಿ ಯೋಗಿನಾರಾಯಣ, ಸೋದರಿ ನಿವೇದಿತಾ, ಪಂ| ದೀನದಯಾಳ ಉಪಾಧ್ಯಾಯ – ಹೀಗೆ ನಾಡಿನ ಮಹಾಪುರುಷರ ಜಯಂತಿಗಳ ಆಚರಣೆಯ ಹೊಸ ಪರಂಪರೆಯಿಂದಾಗಿ ಮಹದೇವಪುರ ಕ್ಷೇತ್ರದಲ್ಲಿ ಸಮನ್ವಯದ ಗಾಳಿ ಬೀಸಿದೆ. ಸಾಮರಸ್ಯದ ಸಂದೇಶ ಬೀರುವ ಈ ಕಾರ್ಯಕ್ರಮಗಳಲ್ಲಿ ಜನರು ಪಕ್ಷಬೇಧ ಮರೆತು ಸಾವಿರಾರು ಸಂಖ್ಯೆಯಲ್ಲಿ ಸ್ವಯಂಸ್ಫೂರ್ತಿಯಿಂದ ಭಾಗವಹಿಸಿದ್ದಾರೆ. ಬಹುಶಃ ಕ್ಷೇತ್ರವು ಶಾಂತ, ಸೌಹಾರ್ದ ವಾತಾವರಣದಿಂದಲೇ ಕೂಡಿರುವುದಕ್ಕೆ ಇಂಥ ಸಾಮಾಜಿಕ ಸಾಮರಸ್ಯದ ಆಚರಣೆಗಳೇ… Continue Reading
- ಕಾದಿದ್ದರು ೩೦ ವರ್ಷ; ಈಗ ಮೂಡಿತು ಹರ್ಷ!- They waited for 30 years Now share the happiness! - ಎಲ್ಲೆಲ್ಲೂ ಶಾಂತಿ-ಸೌಹಾರ್ದ; ಅಪರಾಧ ಪ್ರಮಾಣ ಇಳಿಕೆ: ಬೆಂಗಳೂರು ನಗರದ ಸರಾಸರಿ ಅಪರಾಧ ಪ್ರಮಾಣ ಹೆಚ್ಚಾಗುತ್ತಿದ್ದರೆ, ಮಹದೇವಪುರ ಕ್ಷೇತ್ರದಲ್ಲಿ ಅಪರಾಧಪ್ರಮಾಣವು ಏನಿಲ್ಲೆಂದರೂ ಶೇ. ೨೫ರಷ್ಟು ಕಡಿಮೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಕ್ಷೇತ್ರದಲ್ಲಿ ದಲಿತರು, ಸವರ್ಣೀಯರು, ಹಿಂದುಳಿದ ಸಮಾಜದ ಜನತೆ – ಎಲ್ಲರೂ ಅನ್ಯೋನ್ಯವಾಗಿ ಬಾಳ್ವೆ ನಡೆಸಿದ್ದಾರೆ. ಇದು ರಾಜ್ಯದಲ್ಲೇ ಒಂದು ವಿಶಿಷ್ಟ ಬೆಳವಣಿಗೆ. ಶಾಂತಿ ಸೌಹಾರ್ದದ ವಾತಾವರಣದ ಸ್ಥಿತಿಯೇ ಮಹದೇವಪುರದ ವೈಶಿಷ್ಟ್ಯ. ರಸ್ತೆ ಕ್ರಾಂತಿ ರಸ್ತೆಗಳ ವಿಷಯವನ್ನು ಮರೆಯಲು ಸಾಧ್ಯವೆ? ಅತಿ ಪ್ರಮುಖ ಲಿಂಕ್ ರಸ್ತೆಗಳ ಅಭಿವೃದ್ಧಿಯಿಂದ ಜನತೆಯ… Continue Reading
- ಸಾಮಾಜಿಕ ಅಭ್ಯುದಯದ ದೃಢ ಹೆಜ್ಜೆಗಳು – Firm steps in Social development. - ಯುವಕರಿಗೆ ಕೆಲಸ ದೊರಕಿಸಲು ಉದ್ಯೋಗ ಮೇಳ, ಸಾರ್ವಜನಿಕ ಬಳಕೆಗಾಗಿ ಹಲವೆಡೆ ಸಮುದಾಯ ಭವನಗಳು, ಸುರಕ್ಷತೆಗಾಗಿ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ, ಸುಸಜ್ಜಿತ ವಿದ್ಯುತ್ ಚಿತಾಗಾರ, ದುರ್ಬಲರು, ಅಶಿಕ್ಷಿತರಿಗೆ ವಿವಿಧ ಬಗೆಯ ತರಬೇತಿಗಳು, ಅಂಬೇಡ್ಕರ್ ಭವನಗಳು, ಶಿಕ್ಷಣ ನೀಡಲು ವಿವಿಧ ಶಾಲಾ-ಕಾಲೇಜುಗಳು, ನೀರು ಸಂಗ್ರಹಕ್ಕೆ ಟ್ಯಾಂಕ್ಗಳು, ವಿಧವಾ-ವೃದ್ಧಾಪ್ಯ ವೇತನಗಳು, ಶಾಸಕರ ಅನುದಾನದಿಂದ ವಿವಿಧ ಕಾಮಗಾರಿಗಳು – ಒಂದೆ, ಎರಡೆ? ಅರವಿಂದ ಲಿಂಬಾವಳಿಯವರು ಕ್ಷೇತ್ರದ ಸಾಮಾಜಿಕ ಅಭಿವೃದ್ಧಿಗಾಗಿ ಹಲವು ಆಯಾಮಗಳಲ್ಲಿ ಕೆಲಸ ಮಾಡಿದ್ದಾರೆ. ನಿಜವಾದ ಸರ್ವಸ್ಪರ್ಶಿ ಅಭ್ಯುದಯ ಚಿಂತನೆ ಎಂದರೆ… Continue Reading
- ಅಪಾರ್ಟ್ಮೆಂಟ್ ನಿವಾಸಿಗಳ ಬವಣೆ ಪರಿಹಾರ – Apartment residents’ problems solved - ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಅಪಾರ್ಟ್ಮೆಂಟ್ಗಳಿವೆ. ಇಲ್ಲಿನ ನಿವಾಸಿಗಳು ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್ ಸ್ಥಾಪಿಸಿಕೊಂಡಿದ್ದಾರೆ. ಅರವಿಂದ ಲಿಂಬಾವಳಿಯವರ ಬಳಿ ಅವರು ಹಲವು ಸಮಸ್ಯೆಗಳ ಬಗ್ಗೆ ನಿವೇದಿಸಿಕೊಂಡಿದ್ದರು. ಅವುಗಳಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರಕಿದೆ. ಅಲ್ಲದೆ ಹಲವೆಡೆ ಬೀದಿ ನಾಯಿಗಳ ಹಾವಳಿಯನ್ನೂ ತಪ್ಪಿಸಲಾಗಿದೆ. ಮುಖ್ಯವಾಗಿ ಅಪಾರ್ಟ್ಮೆಂಟ್ಗಳ ಸುತ್ತಮುತ್ತ ಬೇಕಾಗಿದ್ದ ಬೀದಿ ದೀಪಗಳನ್ನು ಸ್ಥಾಪಿಸಲಾಗಿದೆ. ಇದರಿಂದ ನಿವಾಸಿಗಳು ಯಾವ ಭಯವೂ ಇಲ್ಲದೆ ರಾತ್ರಿಯ ಹೊತ್ತು ಸಂಚರಿಸಬಹುದು. ಇದಲ್ಲದೆ ಹಲವು ನಿವಾಸಿಗಳಿಗೆ ಮನೆ ಖರೀದಿ ಮಾಡಿದ್ದರೂ ದೊರಕದೇ ಹೋಗಿದ್ದ ಖಾತಾಪತ್ರಗಳನ್ನು ಅರವಿಂದ… Continue Reading
- ಇಪಿಐಪಿ ಅಭಿವೃದ್ಧಿಯ ಯಶೋಗಾಥೆ – EPIP : A saga of Development - ವೈಟ್ಫೀಲ್ಡ್ನ ಇಪಿಐಪಿ ವಲಯದಲ್ಲಿ ರಸ್ತೆ, ಮಳೆ ನೀರು ಕೊಯ್ಲು, ಕಾಲುದಾರಿ ಸುಧಾರಣೆ ಮತ್ತು ಡಾಂಬರೀಕರಣದ ಕೆಲಸಗಳು ಭರದಿಂದ ಸಾಗಿವೆ. ಇಲ್ಲಿನ ನಾಲ್ಕು ಸಾಲಿನ (೪ ಲೇನ್) ೫.೫ ಕಿಮೀ ಉದ್ದದ ಆಂತರಿಕ ಹೆದ್ದಾರಿಯನ್ನು ಅಸ್ಫಾಲ್ಟ್ ಮಾಡುವ ಕೆಲಸಕ್ಕೆ ೧೬.೪೦ ಕೋಟಿ ರೂ.ಗಳ ಬಿಡುಗಡೆಯಾಗಿದ್ದು ಕಾಮಗಾರಿಯು ಪ್ರಗತಿಯಲ್ಲಿದೆ. ಹಾಗೆಯೇ ಇಲ್ಲಿ ೪.೫೦ ಕಿಮೀ ಉದ್ದದ ೨ ಸಾಲಿನ (೨ ಲೇನ್) ಆಂತರಿಕ ಹೆದ್ದಾರಿಯ ಕಾಮಗಾರಿಯೂ ಪ್ರಗತಿಯಲ್ಲಿದೆ. ಇಪಿಐಪಿ ವಲಯದ ಬಳಿ ಇರುವ ಗ್ರಾಫೈಟ್ ಇಂಡಿಯಾ ಜಂಕ್ಷನ್ನಲ್ಲಿ ದ್ವಿಮುಖ ಸಂಚಾರದ… Continue Reading
- ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ – Improvement in Transport system - ಕಳೆದ ನಾಲ್ಕು ವರ್ಷಗಳಲ್ಲಿ ಮಹದೇವಪುರದ ಸಾರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ರೂಪಾಂತರಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಮಹದೇವಪುರಕ್ಕೆ ಪ್ರತಿ ನಿಮಿಷಕ್ಕೆ ಒಂದರಂತೆ ವೋಲ್ವೋ ಬಸ್ (ಸಂಖ್ಯೆ ೩೩೫ಇ) ಸೌಕರ್ಯವನ್ನು ಒದಗಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಬೆಂಗಳೂರು ನಗರಕ್ಕೆ ಬಂದು ಹೋಗಬಹುದು. ಇಪಿಐಪಿ ಪ್ರದೇಶದಲ್ಲಿ ೩೬ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಟಿಟಿಎಂಸಿ ಬಸ್ ನಿಲ್ದಾಣವನ್ನು ಸ್ಥಾಪಿಸಲಾಗಿದೆ. ಕೊಡತಿ ಮತ್ತು ಗುಂಜೂರಿನಲ್ಲಿ ಹೊಸದಾಗಿ ಬಸ್ ಡಿಪೋಗಳನ್ನು ನಿರ್ಮಿಸಲಾಗಿದೆ. ಈ ಡಿಪೋಗಳು ಸದ್ಯದಲ್ಲೇ ಕಾರ್ಯಾಚರಿಸಲಿವೆ. ಗ್ರಾಮೀಣ ಭಾಗಕ್ಕೂ… Continue Reading
- ಆರೋಗ್ಯಕ್ಕೆ ಆದ್ಯತೆ – Priority to Health - ಈಗ ಆರೋಗ್ಯ ಸಚಿವರಾಗಿರುವ ಅರವಿಂದ ಲಿಂಬಾವಳಿಯವರು ಮಹದೇವಪುರದ ಶಾಸಕರಾದ ಕ್ಷಣದಿಂದಲೂ ಸ್ವಾಸ್ಥ್ಯವನ್ನು ಅತ್ಯಂತ ಜತನದಿಂದ ನೋಡಿಕೊಂಡಿದ್ದಾರೆ. ಎರಡು ಮೆಗಾ ಹೆಲ್ತ್ ಕ್ಯಾಂಪ್ಗಳೂ ಸೇರಿದಂತೆ ಆರು ವೈದ್ಯಕೀಯ ಶಿಬಿರಗಳು ನಡೆದಿವೆ. ವರ್ತೂರಿನಲ್ಲಿ ನಡೆದ ಮೊದಲ ಮೆಗಾ ಹೆಲ್ತ್ ಕ್ಯಾಂಪಿನಲ್ಲಿ ೧೩೭೦೦ ರೋಗಿಗಳನ್ನು ಉಚಿತ ಬಸ್ ವ್ಯವಸ್ಥೆಯ ಮೂಲಕ ಕರೆತಂದು ಎರಡು ದಿನ ಊಟದ ವ್ಯವಸ್ಥೆಯನ್ನೂ ಮಾಡಿ, ಹತ್ತು ದಿನಗಳಿಗಾಗುವಷ್ಟು ಔಷಧಗಳನ್ನೂ ಉಚಿತವಾಗಿ ನೀಡಿದ ಅಗ್ಗಳಿಕೆ ಅರವಿಂದ ಲಿಂಬಾವಳಿಯವರ ಸಂಘಟನಾ ಸಾಮರ್ಥ್ಯಕ್ಕೆ ದೊರಕುವ ನಿದರ್ಶನ. ಇತ್ತೀಚೆಗಷ್ಟೆ ಕಾಡುಗೋಡಿಯಲ್ಲಿ ಎರಡನೇ ಬೃಹತ್… Continue Reading
- ಮನೆಗೆ ದೀಪ, ಬೀದಿಗೆ ಬೆಳಕು – Lights to Houses as well to streets - ೨೦೦೮ರಲಿ ಮಹದೇವಪುರ ಕ್ಷೇತ್ರದ ಹಲವು ಪ್ರದೇಶಗಳು ಬೀದಿ ದೀಪಗಳಿಂದ ವಂಚಿತವಾಗಿದ್ದವು. ವಿದ್ಯುತ್ ಲೈನ್ಗಳೂ ಇಲ್ಲ, ಕಂಬಗಳೂ ಇಲ್ಲದಂಥ ಸ್ಥಿತಿ. ಅರವಿಂದ ಲಿಂಬಾವಳಿಯವರು ವಿದ್ಯುತ್ ಸಂಪರ್ಕ, ಬೀದಿ ದೀಪ, ಗುಣಮಟ್ಟದ ವಿದ್ಯುತ್, ಗ್ರಾಮೀಣ ಪ್ರದೇಶಕ್ಕೂ ನಗರಮಟ್ಟದ ವಿದ್ಯುತ್ – ಹೀಗೆ ಎಲ್ಲ ಅಗತ್ಯಗಳನ್ನೂ ಪೂರೈಸುವಲ್ಲಿ ಯಶ ಪಡೆದಿದ್ದಾರೆ. ಎಲ್ಲಾ ಪ್ರಮುಖ ರಸ್ತೆಗಳಲ್ಲಿ, ಗಲ್ಲಿ ರಸ್ತೆಗಳಲ್ಲಿ ಸಾರ್ವಜನಿಕರು ನಿರ್ಭಯವಾಗಿ ಸಂಚರಿಸಲು ಅನುಕೂಲವಾಗುವಂತೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಪ್ರಮುಖ ಬೀದಿಗಳಲ್ಲಿ ಎರಡೂ ಬದಿ ಚಾಚಿರುವ ಸೋಡಿಯಂ ದೀಪಗಳ ಸ್ತಂಭಗಳನ್ನು ಸ್ಥಾಪಿಸಿ ಎಲ್ಲ… Continue Reading