ಈಗ ಆರೋಗ್ಯ ಸಚಿವರಾಗಿರುವ ಅರವಿಂದ ಲಿಂಬಾವಳಿಯವರು ಮಹದೇವಪುರದ ಶಾಸಕರಾದ ಕ್ಷಣದಿಂದಲೂ ಸ್ವಾಸ್ಥ್ಯವನ್ನು ಅತ್ಯಂತ ಜತನದಿಂದ ನೋಡಿಕೊಂಡಿದ್ದಾರೆ.
- ಎರಡು ಮೆಗಾ ಹೆಲ್ತ್ ಕ್ಯಾಂಪ್‌ಗಳೂ ಸೇರಿದಂತೆ ಆರು ವೈದ್ಯಕೀಯ ಶಿಬಿರಗಳು ನಡೆದಿವೆ. ವರ್ತೂರಿನಲ್ಲಿ ನಡೆದ ಮೊದಲ ಮೆಗಾ ಹೆಲ್ತ್ ಕ್ಯಾಂಪಿನಲ್ಲಿ ೧೩೭೦೦ ರೋಗಿಗಳನ್ನು ಉಚಿತ ಬಸ್ ವ್ಯವಸ್ಥೆಯ ಮೂಲಕ ಕರೆತಂದು ಎರಡು ದಿನ ಊಟದ ವ್ಯವಸ್ಥೆಯನ್ನೂ ಮಾಡಿ, ಹತ್ತು ದಿನಗಳಿಗಾಗುವಷ್ಟು ಔಷಧಗಳನ್ನೂ ಉಚಿತವಾಗಿ ನೀಡಿದ ಅಗ್ಗಳಿಕೆ ಅರವಿಂದ ಲಿಂಬಾವಳಿಯವರ ಸಂಘಟನಾ ಸಾಮರ್ಥ್ಯಕ್ಕೆ ದೊರಕುವ ನಿದರ್ಶನ. ಇತ್ತೀಚೆಗಷ್ಟೆ ಕಾಡುಗೋಡಿಯಲ್ಲಿ ಎರಡನೇ ಬೃಹತ್ ಆರೋಗ್ಯ ಮೇಳ ನಡೆದು ೧೬ ಸಾವಿರ ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು; ಉಚಿತ ಔಷಧಗಳನ್ನೂ ಪಡೆದರು. ಈ ಶಿಬಿರಗಳಲ್ಲಿ ಕಂಡು ಬಂದ ದೊಡ್ಡ ರೋಗಗಳಿಗೆ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿಸಲು ಪಕ್ಷದ ಕಾರ್ಯಕರ್ತರು, ಅರವಿಂದ ಲಿಂಬಾವಳಿಯವರ ಅಭಿಮಾನಿಗಳು ಸ್ವತಃ ತಮ್ಮ ಖಾಸಗಿ ದೇಣಿಗೆಯನ್ನು ನೀಡಿ ಸಮಾಜಪ್ರೇಮ ಮೆರೆದಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆಗಳೆಲ್ಲವೂ ಉಚಿತವಾಗಿ ನಡೆದಿವೆ.
- ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಕ್ಷೇತ್ರದಲ್ಲಿ ಚಿಕಿತ್ಸೆಯ ನೆರವು ಕೋರಿದ ನೂರಾರು ಜನರಿಗೆ ಸಾಧ್ಯವಾದಷ್ಟೂ ಗರಿಷ್ಠ ಪ್ರಮಾಣದ ನೆರವು ದೊರಕುವಲ್ಲಿ ಅರವಿಂದ ಲಿಂಬಾವಳಿ ಶ್ರಮಿಸಿದ್ದಾರೆ.
- ಕ್ಷೇತ್ರದ ಆರೋಗ್ಯ ಸೌಲಭ್ಯಗಳು ಹೆಚ್ಚಾಗಬೇಕು ಎಂಬ ನಿಟ್ಟಿನಲ್ಲಿ ಅರವಿಂದ ಲಿಂಬಾವಳಿಯವರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.
- ಮಂಡೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಂದಿದೆ. ಕಾಡುಗೋಡಿ, ದೊಡ್ಡ ನೆಕ್ಕುಂದಿ, ವರ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ಕಾಮಗಾರಿ ಸಂಪೂರ್ಣವಾಗಿದೆ. ವರ್ತೂರು, ಆವಲಹಳ್ಳಿ, ದೊಡ್ಡ ನೆಕ್ಕುಂದಿ, ಕಾಡುಗೋಡಿ ಕೇಂದ್ರಗಳೀಗ ೨೪ಘಿ೭ ಗಂಟೆಗಳಲ್ಲೂ ಸಾರ್ವಜನಿಕ ಸೇವೆಗಾಗಿ ತೆರೆದಿರುತ್ತವೆ. ಇದಲ್ಲದೆ ದೊಡ್ಡ ನೆಕ್ಕುಂದಿ ಆಸ್ಪತ್ರೆಯಲ್ಲೂ ಹಗಲು – ರಾತ್ರಿಯೆನ್ನದೆ ಸಾರ್ವಜನಿಕರಿಗಾಗಿ ಸೇವೆ ನೀಡಲಾಗುತ್ತಿದೆ.
- ಹಗದೂರು ವಾರ್ಡಿನ ಸಿದ್ದಾಪುರ ಗ್ರಾಮದಲ್ಲಿ ೧೦೦ ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.
- ಆವಲಹಳ್ಳಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಯಾಗಲಿದೆ.
- ಕೊಡತಿ, ಹಾಲನಾಯಕನಹಳ್ಳಿ, ಹೂಡಿ, ಕಣ್ಣೂರು, ಬಿದರಹಳ್ಳಿ ಮತ್ತು ಮಾರತ್‌ಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ಥಾಪನೆಯಾಗಲಿವೆ.
Now Health minister Arvind Limbavali has ably taken care of the health of Mahadevapura constituency, ever since he is MLA.
- Including two mega health camps, totally six medical camps were organized. Mega Health camp organized at Varturu witnessed 13700 patients. All patients were given free transportation and free food supply for two days. Medicines for ten days are also provided free of cost. Arvind Limbavali’s organizing skill was highly appreciated by the participants. Recently held Mega Health camp at Kadugodi witnessed 16000 patients and availed free medicines too. Patients who needed higher medical care were taken to hospitals and treatment was provided by the followers of Arvind Limbavali. Many of his admirers and followers extended financial support to the patients as gesture of their social work. All eye operations were performed free of cost.
- Arvind Limbavali has also extended his support to many patients by making them avail maximum funds from Chief Minister’s relief fund
- He has taken various initiatives to increase medical facilities to the needy ones. Mandur has got primary health centre. Primary health centres of Kadugodi, Doddanekkundi, Varturu will start operating soon, as the construction work is completed. Centres of Varturu, Avalahalli, Doddanekkundi and Kadugodi will provide round the clock service to the people
- Proposed 100 bed hospital will come soon in Siddapur, a village of Hagadur ward. The Bhoomipuja is just over.
- Community Health Centre (CHC)will be established soon at Avalahalli
- Primary Health Centres (PHCs) will be started at Kodati, Halanayakana Halli, Hoodi, Kannuru, Bidarahalli and Marath Halli.
ಸಾಧನೆಗಳು ೨೦೦೮-೧೩ – Achievements 2008-13
- ಸಾಧನೆಯ ಹಾದಿಯಲ್ಲಿ ಶಿಕ್ಷಣ ಕ್ಷೇತ್ರ – Education sector: A spectacular achievement - ಕರ್ನಾಟಕ ರಾಜ್ಯವು ಹಲವು ದಶಕಗಳಿಂದಲೂ ದೇಶದಲ್ಲೇ ಮುಂಚೂಣಿಯಲ್ಲಿರುವ ಉನ್ನತ ಶಿಕ್ಷಣ ಕೇಂದ್ರವಾಗಿದೆ. ಅದರಲ್ಲೂ ಎಂಬತ್ತರ ದಶಕದಿಂದೀಚೆಗೆ ಕರ್ನಾಟಕದಲ್ಲಿ ನೂರಾರು ಕಾಲೇಜುಗಳು ಸ್ಥಾಪನೆಗೊಂಡಿವೆ. ೨೦೦೮ರ ಹೊತ್ತಿಗೆ ಶಿಕ್ಷಣ ರಂಗವು ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿತ್ತು. ದೇಶದ ಮಾನವ ಸಂಪನ್ಮೂಲವನ್ನು ಸಮೃದ್ಧಗೊಳಿಸುವ ಈ ಕಾಯಕದಲ್ಲಿ ಅರವಿಂದ ಲಿಂಬಾವಳಿಯವರು ಗರಿಷ್ಠ ಪ್ರಮಾಣದ ರಚನಾತ್ಮಕ, ಗುಣಾತ್ಮಕ ಬದಲಾವಣೆಗಳನ್ನು ತಂದರು. ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲಾವಧಿಯಲ್ಲಿ ತಳೆದ ನಿರ್ಣಯಗಳು, ರೂಪಿಸಿದ ಕಾರ್ಯಕ್ರಮಗಳು, ಜಾರಿಗೆ ತಂದ ವಿನೂತನ ಉಪಕ್ರಮಗಳೇ ಅವರ ಯಶಸ್ಸಿಗೆ ನಿದರ್ಶನಗಳಾಗಿವೆ. ಕಾಲೇಜು… Continue Reading
- ಶಿಬಿರ,ಮೇಳ,ಉತ್ಸವಗಳ ಸರಮಾಲೆ – A continuous series of Fairs and Festivals - ಮಹದೇವಪುರ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹತ್ತು ಹಲವು ಮೇಳಗಳು ನಡೆದಿವೆ. ನಾಡಿನ ಮಹಾಪುರುಷರ ಜಯಂತಿಗಳನ್ನೂ ವಿಜೃಂಭಣೆಯಿಂದ ಆಚರಿಸಲಾಗಿದೆ.ಯುಗಾದಿ ಹಬ್ಬವೇ ಮಹದೇವಪುರ ಮೇಳವಾಗಿ ರೂಪಾಂತರಗೊಂಡು ಸಾವಿರಾರು ಕುಟುಂಬಗಳನ್ನು ಸೆಳೆದಿದೆ.ಕ್ಷೇತ್ರದಲ್ಲಿ ಎರಡು ಉದ್ಯೋಗ ಮೇಳಗಳು ನಡೆದವು. ಇಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಮೊದಲ ಮೇಳದಲ್ಲಿ ೭೦೦ ಜನರಿಗೆ ಉದ್ಯೋಗ ದೊರಕಿದರೆ, ನ್ಯೂ ಹಾರಿಜಾನ್ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ಎರಡನೇ ಮೇಳದಲ್ಲಿ ೮೧೦ ಜನರಿಗೆ ಕೆಲಸ ಸಿಕ್ಕಿತು.ಮೊದಲ ವರ್ಷ ಮಹದೇವಪುರದಲ್ಲಿ ಆಚರಿಸಿದ ಯುಗಾದಿ ಉತ್ಸವವು ಮರುವರ್ಷದಿಂದ `ಮಹದೇವಪುರ ಉತ್ಸವ’ವಾಗಿ… Continue Reading
- ಧಾರ್ಮಿಕತೆ, ಸಾಮರಸ್ಯದ ತಂಗಾಳಿ – A gentle breeze of religious harmony - ಸ್ವಾಮಿ ವಿವೇಕಾನಂದ, ವೇಮನ, ಕೆಂಪೇಗೌಡ, ಬಸವೇಶ್ವರ, ಕನಕದಾಸರು, ಡಾ|| ಬಿ.ಆರ್. ಆಂಬೇಡ್ಕರ್, ಬಾಬು ಜಗಜೀವನರಾಂ, ದ್ರೌಪದಮ್ಮ, ಸಿದ್ಧರಾಮೇಶ್ವರರು, ಸ್ವಾಮಿ ಯೋಗಿನಾರಾಯಣ, ಸೋದರಿ ನಿವೇದಿತಾ, ಪಂ| ದೀನದಯಾಳ ಉಪಾಧ್ಯಾಯ – ಹೀಗೆ ನಾಡಿನ ಮಹಾಪುರುಷರ ಜಯಂತಿಗಳ ಆಚರಣೆಯ ಹೊಸ ಪರಂಪರೆಯಿಂದಾಗಿ ಮಹದೇವಪುರ ಕ್ಷೇತ್ರದಲ್ಲಿ ಸಮನ್ವಯದ ಗಾಳಿ ಬೀಸಿದೆ. ಸಾಮರಸ್ಯದ ಸಂದೇಶ ಬೀರುವ ಈ ಕಾರ್ಯಕ್ರಮಗಳಲ್ಲಿ ಜನರು ಪಕ್ಷಬೇಧ ಮರೆತು ಸಾವಿರಾರು ಸಂಖ್ಯೆಯಲ್ಲಿ ಸ್ವಯಂಸ್ಫೂರ್ತಿಯಿಂದ ಭಾಗವಹಿಸಿದ್ದಾರೆ. ಬಹುಶಃ ಕ್ಷೇತ್ರವು ಶಾಂತ, ಸೌಹಾರ್ದ ವಾತಾವರಣದಿಂದಲೇ ಕೂಡಿರುವುದಕ್ಕೆ ಇಂಥ ಸಾಮಾಜಿಕ ಸಾಮರಸ್ಯದ ಆಚರಣೆಗಳೇ… Continue Reading
- ಕಾದಿದ್ದರು ೩೦ ವರ್ಷ; ಈಗ ಮೂಡಿತು ಹರ್ಷ!- They waited for 30 years Now share the happiness! - ಎಲ್ಲೆಲ್ಲೂ ಶಾಂತಿ-ಸೌಹಾರ್ದ; ಅಪರಾಧ ಪ್ರಮಾಣ ಇಳಿಕೆ: ಬೆಂಗಳೂರು ನಗರದ ಸರಾಸರಿ ಅಪರಾಧ ಪ್ರಮಾಣ ಹೆಚ್ಚಾಗುತ್ತಿದ್ದರೆ, ಮಹದೇವಪುರ ಕ್ಷೇತ್ರದಲ್ಲಿ ಅಪರಾಧಪ್ರಮಾಣವು ಏನಿಲ್ಲೆಂದರೂ ಶೇ. ೨೫ರಷ್ಟು ಕಡಿಮೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಕ್ಷೇತ್ರದಲ್ಲಿ ದಲಿತರು, ಸವರ್ಣೀಯರು, ಹಿಂದುಳಿದ ಸಮಾಜದ ಜನತೆ – ಎಲ್ಲರೂ ಅನ್ಯೋನ್ಯವಾಗಿ ಬಾಳ್ವೆ ನಡೆಸಿದ್ದಾರೆ. ಇದು ರಾಜ್ಯದಲ್ಲೇ ಒಂದು ವಿಶಿಷ್ಟ ಬೆಳವಣಿಗೆ. ಶಾಂತಿ ಸೌಹಾರ್ದದ ವಾತಾವರಣದ ಸ್ಥಿತಿಯೇ ಮಹದೇವಪುರದ ವೈಶಿಷ್ಟ್ಯ. ರಸ್ತೆ ಕ್ರಾಂತಿ ರಸ್ತೆಗಳ ವಿಷಯವನ್ನು ಮರೆಯಲು ಸಾಧ್ಯವೆ? ಅತಿ ಪ್ರಮುಖ ಲಿಂಕ್ ರಸ್ತೆಗಳ ಅಭಿವೃದ್ಧಿಯಿಂದ ಜನತೆಯ… Continue Reading
- ಸಾಮಾಜಿಕ ಅಭ್ಯುದಯದ ದೃಢ ಹೆಜ್ಜೆಗಳು – Firm steps in Social development. - ಯುವಕರಿಗೆ ಕೆಲಸ ದೊರಕಿಸಲು ಉದ್ಯೋಗ ಮೇಳ, ಸಾರ್ವಜನಿಕ ಬಳಕೆಗಾಗಿ ಹಲವೆಡೆ ಸಮುದಾಯ ಭವನಗಳು, ಸುರಕ್ಷತೆಗಾಗಿ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ, ಸುಸಜ್ಜಿತ ವಿದ್ಯುತ್ ಚಿತಾಗಾರ, ದುರ್ಬಲರು, ಅಶಿಕ್ಷಿತರಿಗೆ ವಿವಿಧ ಬಗೆಯ ತರಬೇತಿಗಳು, ಅಂಬೇಡ್ಕರ್ ಭವನಗಳು, ಶಿಕ್ಷಣ ನೀಡಲು ವಿವಿಧ ಶಾಲಾ-ಕಾಲೇಜುಗಳು, ನೀರು ಸಂಗ್ರಹಕ್ಕೆ ಟ್ಯಾಂಕ್‌ಗಳು, ವಿಧವಾ-ವೃದ್ಧಾಪ್ಯ ವೇತನಗಳು, ಶಾಸಕರ ಅನುದಾನದಿಂದ ವಿವಿಧ ಕಾಮಗಾರಿಗಳು – ಒಂದೆ, ಎರಡೆ? ಅರವಿಂದ ಲಿಂಬಾವಳಿಯವರು ಕ್ಷೇತ್ರದ ಸಾಮಾಜಿಕ ಅಭಿವೃದ್ಧಿಗಾಗಿ ಹಲವು ಆಯಾಮಗಳಲ್ಲಿ ಕೆಲಸ ಮಾಡಿದ್ದಾರೆ. ನಿಜವಾದ ಸರ್ವಸ್ಪರ್ಶಿ ಅಭ್ಯುದಯ ಚಿಂತನೆ ಎಂದರೆ… Continue Reading
- ಅಪಾರ್ಟ್ಮೆಂಟ್ ನಿವಾಸಿಗಳ ಬವಣೆ ಪರಿಹಾರ – Apartment residents’ problems solved - ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಅಪಾರ್ಟ್‌ಮೆಂಟ್‌ಗಳಿವೆ. ಇಲ್ಲಿನ ನಿವಾಸಿಗಳು ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಶನ್ ಸ್ಥಾಪಿಸಿಕೊಂಡಿದ್ದಾರೆ. ಅರವಿಂದ ಲಿಂಬಾವಳಿಯವರ ಬಳಿ ಅವರು ಹಲವು ಸಮಸ್ಯೆಗಳ ಬಗ್ಗೆ ನಿವೇದಿಸಿಕೊಂಡಿದ್ದರು. ಅವುಗಳಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರಕಿದೆ. ಅಲ್ಲದೆ ಹಲವೆಡೆ ಬೀದಿ ನಾಯಿಗಳ ಹಾವಳಿಯನ್ನೂ ತಪ್ಪಿಸಲಾಗಿದೆ. ಮುಖ್ಯವಾಗಿ ಅಪಾರ್ಟ್‌ಮೆಂಟ್‌ಗಳ ಸುತ್ತಮುತ್ತ ಬೇಕಾಗಿದ್ದ ಬೀದಿ ದೀಪಗಳನ್ನು ಸ್ಥಾಪಿಸಲಾಗಿದೆ. ಇದರಿಂದ ನಿವಾಸಿಗಳು ಯಾವ ಭಯವೂ ಇಲ್ಲದೆ ರಾತ್ರಿಯ ಹೊತ್ತು ಸಂಚರಿಸಬಹುದು. ಇದಲ್ಲದೆ ಹಲವು ನಿವಾಸಿಗಳಿಗೆ ಮನೆ ಖರೀದಿ ಮಾಡಿದ್ದರೂ ದೊರಕದೇ ಹೋಗಿದ್ದ ಖಾತಾಪತ್ರಗಳನ್ನು ಅರವಿಂದ… Continue Reading
- ಇಪಿಐಪಿ ಅಭಿವೃದ್ಧಿಯ ಯಶೋಗಾಥೆ – EPIP : A saga of Development - ವೈಟ್‌ಫೀಲ್ಡ್‌ನ ಇಪಿಐಪಿ ವಲಯದಲ್ಲಿ ರಸ್ತೆ, ಮಳೆ ನೀರು ಕೊಯ್ಲು, ಕಾಲುದಾರಿ ಸುಧಾರಣೆ ಮತ್ತು ಡಾಂಬರೀಕರಣದ ಕೆಲಸಗಳು ಭರದಿಂದ ಸಾಗಿವೆ. ಇಲ್ಲಿನ ನಾಲ್ಕು ಸಾಲಿನ (೪ ಲೇನ್) ೫.೫ ಕಿಮೀ ಉದ್ದದ ಆಂತರಿಕ ಹೆದ್ದಾರಿಯನ್ನು ಅಸ್ಫಾಲ್ಟ್ ಮಾಡುವ ಕೆಲಸಕ್ಕೆ ೧೬.೪೦ ಕೋಟಿ ರೂ.ಗಳ ಬಿಡುಗಡೆಯಾಗಿದ್ದು ಕಾಮಗಾರಿಯು ಪ್ರಗತಿಯಲ್ಲಿದೆ. ಹಾಗೆಯೇ ಇಲ್ಲಿ ೪.೫೦ ಕಿಮೀ ಉದ್ದದ ೨ ಸಾಲಿನ (೨ ಲೇನ್) ಆಂತರಿಕ ಹೆದ್ದಾರಿಯ ಕಾಮಗಾರಿಯೂ ಪ್ರಗತಿಯಲ್ಲಿದೆ. ಇಪಿಐಪಿ ವಲಯದ ಬಳಿ ಇರುವ ಗ್ರಾಫೈಟ್ ಇಂಡಿಯಾ ಜಂಕ್ಷನ್‌ನಲ್ಲಿ ದ್ವಿಮುಖ ಸಂಚಾರದ… Continue Reading
- ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ – Improvement in Transport system - ಕಳೆದ ನಾಲ್ಕು ವರ್ಷಗಳಲ್ಲಿ ಮಹದೇವಪುರದ ಸಾರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ರೂಪಾಂತರಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಮಹದೇವಪುರಕ್ಕೆ ಪ್ರತಿ ನಿಮಿಷಕ್ಕೆ ಒಂದರಂತೆ ವೋಲ್ವೋ ಬಸ್ (ಸಂಖ್ಯೆ ೩೩೫ಇ) ಸೌಕರ್ಯವನ್ನು ಒದಗಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಬೆಂಗಳೂರು ನಗರಕ್ಕೆ ಬಂದು ಹೋಗಬಹುದು. ಇಪಿಐಪಿ ಪ್ರದೇಶದಲ್ಲಿ ೩೬ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಟಿಟಿಎಂಸಿ ಬಸ್ ನಿಲ್ದಾಣವನ್ನು ಸ್ಥಾಪಿಸಲಾಗಿದೆ. ಕೊಡತಿ ಮತ್ತು ಗುಂಜೂರಿನಲ್ಲಿ ಹೊಸದಾಗಿ ಬಸ್ ಡಿಪೋಗಳನ್ನು ನಿರ್ಮಿಸಲಾಗಿದೆ. ಈ ಡಿಪೋಗಳು ಸದ್ಯದಲ್ಲೇ ಕಾರ್ಯಾಚರಿಸಲಿವೆ. ಗ್ರಾಮೀಣ ಭಾಗಕ್ಕೂ… Continue Reading
- ಅಕ್ಷರ ಕ್ರಾಂತಿಯ ಹೊಸ ಅಧ್ಯಾಯ – Revolution in the field of Education: A novel experiment - ಅರವಿಂದ ಲಿಂಬಾವಳಿ ಶಿಕ್ಷಣ ರಂಗದಲ್ಲೇ ಹೋರಾಟ ಮಾಡುತ್ತಲೇ ಬೆಳೆದ ಯುವ ನಾಯಕರು. ಶಾಸಕರಾದ ಮೇಲೆ ಮಹದೇವಪುರದಲ್ಲಿ ಶಿಕ್ಷಣ ಕ್ರಾಂತಿಗೆ ಅವರು ಮಾಡಿದ ಯತ್ನಗಳನ್ನು ಕಣ್ಣಾರೆ ಕಾಣಬಹುದು. ವರ್ತೂರು ಮತ್ತು ಕಾಡುಗೋಡಿ – ಒಟ್ಟು ಎರಡು ಪದವಿ ಕಾಲೇಜುಗಳು ಕ್ಷೇತ್ರಕ್ಕೆ ಬಂದಿವೆ. ಬೆಂಗಳೂರಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಎಂದರೆ ಎಸ್ ಜೆ ಪಾಲಿಟೆಕ್ನಿಕ್ ಮಾತ್ರ ಎಂದೇ ಮಾತಿರುವಾಗ ಕಾಡುಗೋಡಿ ವಾರ್ಡಿನ ಚನ್ನಸಂದ್ರ, ಹಗದೂರು ವಾರ್ಡಿನ ಇಮ್ಮಡಿಹಳ್ಳಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕೂಡಾ ಸ್ಥಾಪನೆಯಾಗಿವೆ. ಎಲ್ಲದಕ್ಕೂ ನಿವೇಶನಗಳೂ ಇವೆ; ಕಟ್ಟಡಗಳ ನಿರ್ಮಾಣ ಆರಂಭವಾಗಬೇಕಿದೆ.… Continue Reading
- ಮನೆಗೆ ದೀಪ, ಬೀದಿಗೆ ಬೆಳಕು – Lights to Houses as well to streets - ೨೦೦೮ರಲಿ ಮಹದೇವಪುರ ಕ್ಷೇತ್ರದ ಹಲವು ಪ್ರದೇಶಗಳು ಬೀದಿ ದೀಪಗಳಿಂದ ವಂಚಿತವಾಗಿದ್ದವು. ವಿದ್ಯುತ್ ಲೈನ್‌ಗಳೂ ಇಲ್ಲ, ಕಂಬಗಳೂ ಇಲ್ಲದಂಥ ಸ್ಥಿತಿ. ಅರವಿಂದ ಲಿಂಬಾವಳಿಯವರು ವಿದ್ಯುತ್ ಸಂಪರ್ಕ, ಬೀದಿ ದೀಪ, ಗುಣಮಟ್ಟದ ವಿದ್ಯುತ್, ಗ್ರಾಮೀಣ ಪ್ರದೇಶಕ್ಕೂ ನಗರಮಟ್ಟದ ವಿದ್ಯುತ್ – ಹೀಗೆ ಎಲ್ಲ ಅಗತ್ಯಗಳನ್ನೂ ಪೂರೈಸುವಲ್ಲಿ ಯಶ ಪಡೆದಿದ್ದಾರೆ. ಎಲ್ಲಾ ಪ್ರಮುಖ ರಸ್ತೆಗಳಲ್ಲಿ, ಗಲ್ಲಿ ರಸ್ತೆಗಳಲ್ಲಿ ಸಾರ್ವಜನಿಕರು ನಿರ್ಭಯವಾಗಿ ಸಂಚರಿಸಲು ಅನುಕೂಲವಾಗುವಂತೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಪ್ರಮುಖ ಬೀದಿಗಳಲ್ಲಿ ಎರಡೂ ಬದಿ ಚಾಚಿರುವ ಸೋಡಿಯಂ ದೀಪಗಳ ಸ್ತಂಭಗಳನ್ನು ಸ್ಥಾಪಿಸಿ ಎಲ್ಲ… Continue Reading