ಎಲ್ಲೆಲ್ಲೂ ಶಾಂತಿ-ಸೌಹಾರ್ದ; ಅಪರಾಧ ಪ್ರಮಾಣ ಇಳಿಕೆ:
ಬೆಂಗಳೂರು ನಗರದ ಸರಾಸರಿ ಅಪರಾಧ ಪ್ರಮಾಣ ಹೆಚ್ಚಾಗುತ್ತಿದ್ದರೆ, ಮಹದೇವಪುರ ಕ್ಷೇತ್ರದಲ್ಲಿ ಅಪರಾಧಪ್ರಮಾಣವು ಏನಿಲ್ಲೆಂದರೂ ಶೇ. ೨೫ರಷ್ಟು ಕಡಿಮೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಕ್ಷೇತ್ರದಲ್ಲಿ ದಲಿತರು, ಸವರ್ಣೀಯರು, ಹಿಂದುಳಿದ ಸಮಾಜದ ಜನತೆ – ಎಲ್ಲರೂ ಅನ್ಯೋನ್ಯವಾಗಿ ಬಾಳ್ವೆ ನಡೆಸಿದ್ದಾರೆ. ಇದು ರಾಜ್ಯದಲ್ಲೇ ಒಂದು ವಿಶಿಷ್ಟ ಬೆಳವಣಿಗೆ. ಶಾಂತಿ ಸೌಹಾರ್ದದ ವಾತಾವರಣದ ಸ್ಥಿತಿಯೇ ಮಹದೇವಪುರದ ವೈಶಿಷ್ಟ್ಯ.
ರಸ್ತೆ ಕ್ರಾಂತಿ
ರಸ್ತೆಗಳ ವಿಷಯವನ್ನು ಮರೆಯಲು ಸಾಧ್ಯವೆ? ಅತಿ ಪ್ರಮುಖ ಲಿಂಕ್ ರಸ್ತೆಗಳ ಅಭಿವೃದ್ಧಿಯಿಂದ ಜನತೆಯ ಸಮಯ ಉಳಿದಿದೆ; ಪ್ರಯಾಣ ಸರಾಗವಾಗಿದೆ; ಇದು ಆರ್ಥಿಕತೆಯ ಮೇಲೂ ಒಳ್ಳೆಯ ಪರಿಣಾಮ ಬೀರಿದೆ. ಎಲ್ಲ ಸ್ತರದ ರಸ್ತೆಗಳೂ ಗುಣಮಟ್ಟದ ಅಭಿವೃದ್ಧಿ ಕಂಡಿರುವುದರಿಂದ ನಗರದ ಚಹರೆಯೇ ಸಂಪೂರ್ಣ ಬದಲಾಗಿದೆ.
- ಎಚ್‌ಎಎಲ್ ಮುಖ್ಯರಸ್ತೆಯಿಂದ ದೊಡ್ಡನೆಕ್ಕುಂದಿ, ಹೊರ ವರ್ತುಲ ರಸ್ತೆ, ಚಿನ್ನಪ್ಪನಹಳ್ಳಿ ಬಡಾವಣೆ, ಆಲ್ಪೈನ್ ಅಪಾರ್ಟ್‌ಮೆಂಟ್, ಗ್ರಾಫೈಟ್ ಇಂಡಿಯಾ ಮೂಲಕ ಐಟಿಪಿಎಲ್ ರಸ್ತೆವರೆಗೆ ರಸ್ತೆ ನಿರ್ಮಾಣ ಆಗಿದೆ. ಇದರಿಂದಾಗಿ ಮಾರತ್‌ಹಳ್ಳಿ ಮತ್ತು ಕುಂದಲಹಳ್ಳಿ ಜಂಕ್ಷನ್‌ಗಳಲ್ಲಿ ವಾಹನದಟ್ಟಣೆ ತೀವ್ರ ಇಳಿಮುಖವಾಗಿದೆ. ಪ್ರಯಾಣದ ಸಮಯವೂ ಉಳಿತಾಯವಾಗಿದೆ. ದೊಡ್ಡನೆಕ್ಕುಂದಿ ವಾರ್ಡ್‌ನ ಬಹುತೇಕ ರಸ್ತೆಗಳು ಅಭಿವೃದ್ಧಿ ಕಂಡಿವೆ. ಅದೇ ರೀತಿ ಕಾಡುಗೋಡಿಯ ರಸ್ತೆಗಳೂ ಸುಧಾರಣೆ ಕಂಡಿವೆ.
- ರಾಷ್ಟ್ರೀಯ ಹೆದ್ದಾರಿ ೪ರಿಂದ ಕುರುಡುಸೊನ್ನೇನಹಳ್ಳಿ, ಕೆ ದೊಮ್ಮಸಂದ್ರ, ಬೆಳತೂರು ಮಾರ್ಗ ಕಾಡುಗೋಡಿ ರಸ್ತೆ ಸೇರುವ ರಸ್ತೆಯು ಅಭಿವೃದ್ಧಿಯಾಗಿದ್ದು ಇದು ಐಟಿಪಿಎಲ್‌ಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ.
- ಆವಲಹಳ್ಳಿಯಿಂದ ಹಿರಂಡಹಳ್ಳಿ ರಾಂಪುರ, ಬಿಳಿಶಿವಾಲೆ ಮೂಲಕ ಬಾಗಲೂರು ರಸ್ತೆ ನಿರ್ಮಾಣದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣ ಸುಲಲಿತವಾಗಿದೆ. ಜೊತೆಗೆ ದೊಮ್ಮಸಂದ್ರ, ಸೂಲಿಕುಂಟೆ, ಚಿಕ್ಕನಾಯಕನಹಳ್ಳಿ ದಿನ್ನೆ ಮಾರ್ಗವಾಗಿ ಪರಪ್ಪನ ಅಗ್ರಹಾರ ಸೇರುವ ಲಿಂಕ್ ರಸ್ತೆಯೂ ಹಿಂದೆಂದೂ ಕಾಣದ ಸುಧಾರಣೆ ಕಂಡಿದೆ. ಕೋದಂಡರಾಮನಗರದ ರಸ್ತೆಗಳೂ ಈಗಷ್ಟೇ ಅಭಿವೃದ್ಧಿಯಾಗಿವೆ.
- ಹಗದೂರು ವಾರ್ಡಿನ ವ್ಯಾಪ್ತಿಯಲ್ಲಿ ಸಿದ್ದಾಪುರದಿಂದ ನಲ್ಲೂರಹಳ್ಳಿ ಮಾರ್ಗವಾಗಿ ವೈಟ್‌ಫೀಲ್ಡ್ ರಸ್ತೆಗೆ ಲಿಂಕ್ ರಸ್ತೆ ಹಾಗೂ ವೈಟ್‌ಫೀಲ್ಡ್ ರಸ್ತೆಯಿಂದ ಹಗದೂರು, ಇಮ್ಮಡಿಹಳ್ಳಿ ಮತ್ತು ನಾಗೊಂಡನಹಳ್ಳಿ ಮಾರ್ಗ ಚನ್ನಸಂದ್ರ (ಚಿಕ್ಕ ತಿರುಪತಿ ರಸ್ತೆ) ಲಿಂಕ್ ರಸ್ತೆಯೂ ಸೇರಿದಂತೆ ಹಲವು ರಸ್ತೆಗಳು ಅಭಿವೃದ್ಧಿಯಾಗಿವೆ.
- ಸರ್ಜಾಪುರ ರಸ್ತೆಯಿಂದ ಗೇರ್ ಕಾಲೇಜು, ದೇವರಬಿಸನಹಳ್ಳಿ ಮಾರ್ಗ ಹೊರ ವರ್ತುಲ ರಸ್ತೆ ನಿರ್ಮಾಣದಿಂದ ಜನತೆಗೆ ಸುಮಾರು ೪ ಕಿಲೋಮೀಟರ್ ಅಂತರ ಕಡಿಮೆಯಾಗಿದೆ. ಹೂಡಿ, ಐಯಪ್ಪನಗರ, ವಾರಣಾಸಿ, ಬಿಳಿ ಶಿವಾಲೆ, ಬೈರತಿ, ಬೈರತಿ ಬಂಡೆ, ಬೆಳತ್ತೂರು, ಬೆಳತ್ತೂರು ಕಾಲೋನಿಗಳಲ್ಲಿ ರಸ್ತೆಗಳು ಈ ಕಾಲಾವಧಿಯಲ್ಲೇ ಸುಧಾರಣೆ ಕಂಡಿವೆ.
- ಹೊರವರ್ತುಲ ರಸ್ತೆಯಿಂದ ಚಿನ್ನಪ್ಪನಹಳ್ಳಿ, ಕುಂದಲಹಳ್ಳಿ ಕಾಲೋನಿ ಮಾರ್ಗ ಐಟಿಪಿಎಲ್ ರಸ್ತೆ ಸೇರುವ ರಸ್ತೆಯೂ ಅಭಿವೃದ್ಧಿಯಾಗಿದ್ದು ಪ್ರಯಾಣದ ಅಂತರ ಕಡಿಮೆಯಾಗಿದೆ.
ಕಾದಿದ್ದರು ೩೦ ವರ್ಷ; ಈಗ ಮೂಡಿತು ಹರ್ಷ!
- ಟಿಸಿ ಪಾಳ್ಯ ಮುಖ್ಯರಸ್ತೆಯಿಂದ ವಾರಣಾಸಿ ಮಾರ್ಗ ಕೆ ಚನ್ನಸಂದ್ರ ಸೇರುವ ರಸ್ತೆಯೂ ಅಭಿವೃದ್ಧಿಯಾಗಿದೆ.
- ಹೊರವರ್ತುಲ ರಸ್ತೆಯ ಬೆಳ್ಳಂದೂರು ಮತ್ತು ದೇವರಬಿಸನಹಳ್ಳಿ ಬಳಿ ಮೇಲುಸೇತುವೆ, ಕಾಡುಬಿಸನಹಳ್ಳಿಯಲ್ಲಿ ಕೆಳಸೇತುವೆ ಕಾಮಗಾರಿಗಳು ಮುನ್ನಡೆದಿವೆ.
- ಆವಲಹಳ್ಳಿ, ಮಂಡೂರು ಮತ್ತು ಬಿದರಹಳ್ಳಿ ವಾರ್ಡಿನ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಪ್ರಮುಖ ಸಂಪರ್ಕ ರಸ್ತೆಗಳು ಸುಧಾರಿಸಿವೆ. ಈ ಮೂರು ವಾರ್ಡುಗಳ ೧೧ ಪ್ರಮುಖ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲಾಗಿದೆ. ಕಣ್ಣೂರು ಮುಖ್ಯರಸ್ತೆಯನ್ನೂ ಅಭಿವೃದ್ಧಿಪಡಿಸಲಾಗಿದೆ.
- ರಾಷ್ಟ್ರೀಯ ಹೆದ್ದಾರಿಯಿಂದ ವೀರೇನಹಳ್ಳಿ, ದೊಡ್ಡಬನಹಳ್ಳಿ ಮಾರ್ಗವಾಗಿ ಎಚ್‌ಕೆಎ ರಸ್ತೆ ಸೇರುವ ರಸ್ತೆಯಿಂದಾಗಿ ೧೦ ಕಿಮೀ ಪ್ರಯಾಣದೂರ ಉಳಿತಾಯವಾಗಿದೆ.
- ಪರಪ್ಪನ ಅಗ್ರಹಾರ ಮುಖ್ಯರಸ್ತೆಯಿಂದ ಮಾತಾ ಅಮೃತಾನಂದಮಯೀ ಕಾಲೇಜು, ಕೋದಂಡರಾಮನಗರ, ಅಮೃತನಗರ, ಹಾಲನಾಯಕನಹಳ್ಳಿ ಕೆರೆ ಏರಿ, ಸೋಮೇಶ್ವರ ಬಡಾವಣೆ ಮೂಲಕ ದೊಡ್ಡಕನ್ನಲ್ಲಿ ಸೇರುವ ರಸ್ತೆಯೂ ಪ್ರಗತಿಯಲ್ಲಿದೆ. ಇದೂ ಕೂಡ ಪ್ರಮುಖ ಒಳಸಂಪರ್ಕ ರಸ್ತೆಯಾಗಿದೆ.
- ಹಾಗೆಯೇ ಕಿತ್ತಗನೂರು, ಹಳೆಹಳ್ಳಿ, ಮಾರಗೊಂಡನಹಳ್ಳಿ, ಕೆ ಚನ್ನಸಂದ್ರ ರಸ್ತೆ ಮೂಲಕ ಬಿಳಿಶಿವಾಲೆಗೆ ಸೇರುವ ರಸ್ತೆಯು ಆ ಭಾಗದ ಜನತೆಗೆ ನೆಮ್ಮದಿ ತಂದಿದೆ.
- ವೈಟ್‌ಫೀಲ್ಡ್ ಚನ್ನಸಂದ್ರ ರಸ್ತೆಯಲ್ಲಿ ಇಮ್ಮಡಿಹಳ್ಳಿ ಕರುಮಾರಿಯಮ್ಮನ ದೇವಸ್ಥಾನದ ಬಳಿ ಪ್ರಮುಖ ಸಂಪರ್ಕಸೇತುವೆ, ರಾಂಪುರ ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಸೇತುವೆ, ದೊಡ್ಡಗುಬ್ಬಿ ಆಲ್ಫಾ ಕಾಲೇಜು ಬಳಿ ಸೇತುವೆ ಈಗಾಗಲೇ ಸಾರ್ವಜನಿಕರ ಬಳಕೆಯಲ್ಲಿವೆ. ಯಮಲೂರು ಬಳಿ ಬೆಳ್ಳಂದೂರು ಕೆರೆಗೆ ಸೇತುವೆ ನಿರ್ಮಾಣ ಪ್ರಗತಿಯಲ್ಲಿದೆ. ಕಿತ್ತಗನೂರು ಬಳಿ ಕೆರೆಗೆ ಸೇತುವೆ ನಿರ್ಮಿಸಿ ರಾ.ಹೆ.೪ರಿಂದ ಕಿತ್ತಗನೂರು ಮಾರ್ಗ ಬಿದರಹಳ್ಳಿ ಬಳಿ ಬೈರತಿ – ಆವಲಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ.
- ಅಯ್ಯಪ್ಪನಗರದಲ್ಲಿ ೫ ಕೋಟಿ ರೂ. ಕಾಮಗಾರಿ ನಡೆದಿದೆ. ಅಲ್ಲೆಲ್ಲ ಬರೀ ಮಣ್ಣಿನ ರಸ್ತೆಗಳಿದ್ದವು; ಚರಂಡಿಯಂತೂ ಇರಲೇ ಇಲ್ಲ.
- ಅಯ್ಯಪ್ಪನಗರ-ಕೊಡಿಗೇಹಳ್ಳಿ-ಸಾದರಮಂಗಲ-ಬೆಳತ್ತೂರು ಪರ್ಯಾಯ ರಸ್ತೆಯನ್ನು ನಿರ್ಮಿಸಿದ್ದರಿಂದ ಇಡೀ ಪರಿಸರದ ಚಿತ್ರ ಬದಲಾಗಿದೆ. ಈ ಪ್ರದೇಶವೀಗ ರಿಯಲ್ ಎಸ್ಟೇಟ್ ರಂಗದಲ್ಲಿ ಭಾರೀ ಏರಿಕೆ ಕಂಡಿದೆ.
- ಐಟಿಪಿಎಲ್ ರಸ್ತೆಯಿಂದ ರಾಜಪಾಳ್ಯ, ತಿಗಳ ಪಾಳ್ಯಕ್ಕೆ ಹೋಗುವ ರಸ್ತೆಯು ಮೊದಲು ತುಂಬಾ ಕಿರಿದಾಗಿತ್ತು; ಅಲ್ಲಿನ ಖಾಸಗಿ ಭೂಮಾಲಿಕರ ಮನ ಒಲಿಸಿ ರಸ್ತೆಯನ್ನು ಅಗಲೀಕರಿಸಿದ್ದು ಇಲ್ಲಿನ ಪ್ರಮುಖ ಬಾಟಲ್‌ನೆಕ್ ನಿವಾರಣೆಯಾಗಿದೆ.
ಹಕ್ಕುಪತ್ರಗಳ ವಿತರಣೆ
ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಹಕ್ಕುಪತ್ರಗಳನ್ನು ವಿತರಿಸುವ ಅಭಿಯಾನ ಈಗ ನಿರಂತರವಾಗಿ ನಡೆದಿದೆ. ಸರ್ಕಾರದ ನಿಯಮಗಳ ಅಡಿಯಲ್ಲೇ ನಿವೇಶನ ಹಕ್ಕುಪತ್ರ ಪಡೆಯಬೇಕಿದ್ದವರು ಅನುಭವಿಸುತ್ತಿದ್ದ ಬವಣೆ ಈಗಿಲ್ಲ. ಕಾನೂನುಬದ್ಧ ಅರ್ಹ ಫಲಾನುಭವಿಗಳೀಗ ಹಕ್ಕುಪತ್ರ ಪಡೆದ ಸಂತಸದಲ್ಲಿದ್ದಾರೆ. ದೇವರಬಿಸನಹಳ್ಳಿ, ಕೆಂಪಾಪುರ ಕಾಲೋನಿ, ಗೊರವಿಗೆರೆ, ಕನ್ನಮಂಗಲ ದಿನ್ನೆ, ಹುಸ್ಕೂರು ಕೋಡಿ, ಬಸವಣ್ಣ ನಗರ, ಕಾವೇರಿ ನಗರ, ವಿಜಯನಗರ, ಗಾಂಧೀಪುರ ಮತ್ತಿತರೆ ಗ್ರಾಮಗಳಲ್ಲಿ ಸರ್ಕಾರಿ ಜಾಗದಲ್ಲಿ ೩೦ ವರ್ಷಗಳಿಂದಲೂ ಮನೆ ಕಟ್ಟಿಕೊಂಡಿದ್ದವರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಇನ್ನೂ ೭೦ಕ್ಕೂ ಹೆಚ್ಚು ಸರ್ಕಾರಿ ಪ್ರದೇಶಗಳ ಜನತೆಗೆ ಹಕ್ಕುಪತ್ರಗಳನ್ನು ನೀಡು ಕಾರ್ಯವು ಪ್ರಗತಿಯಲ್ಲಿದೆ. ಚೌಳುಕೆರೆ ದಂಡೆಯ ಮೇಲೆ ವಾಸಿಸುತ್ತಿರುವವರನ್ನು ವರ್ತೂರು ಗ್ರಾಮದಲ್ಲಿ ಕೊಳಚೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣ ಮಾಡಿರುವ ಮನೆಗಳಿಗೆ ಹಕ್ಕುಪತ್ರ ನೀಡಿ ಸ್ಥಳಾಂತರಿಸಲಾಗುತ್ತಿದೆ. ಹಾಗೆಯೇ ಕ್ಷೇತ್ರದ ಬಡ ನಗರವಾಸಿಗಳನ್ನು ಗುರುತಿಸಿ ಅವರಿಗೆ ಸಾದರಮಂಗಲ ಮತ್ತು ವರ್ತೂರಿನಲ್ಲಿ ಕೊಳಚೆಗೇರಿ ಅಭಿವೃದ್ಧಿ ಮಂಡಳಿಯು ನಿರ್ಮಾಣ ಮಾಡಿರುವ ಮನೆಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಶಿಕ್ಷಣ ಸುಧಾರಣೆ
- ಈವರೆಗೂ ಕ್ಷೇತ್ರದ ವಿದ್ಯಾರ್ಥಿನಿಯರು ಎಸೆಸೆಲ್ಸಿ, ಪಿಯುಸಿಗೇ ಓದು ನಿಲ್ಲಿಸುತ್ತಿದ್ದರು. ಈಗ ಚಿತ್ರಣ ಸಂಪೂರ್ಣ ಬದಲಾಗಿದೆ.
- ವರ್ತೂರು ಮತ್ತು ಕಾಡುಗೋಡಿಯಲ್ಲಿ ಪ್ರಥಮದರ್ಜೆ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಈ ಕಾಲೇಜುಗಳಲ್ಲಿ ಶಿಕ್ಷಣ ವಂಚಿತ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಉತ್ತಮ ಬೋಧಕ ಸಿಬ್ಬಂದಿಯ ನೆರವಿನಿಂದ ಕಲಿಕೆಯ ಗುಣಮಟ್ಟವೂ ಹೆಚ್ಚಿದೆ. ಫಲಿತಾಂಶದಲ್ಲೂ ಏರಿಕೆ ಕಂಡಿದೆ.
- ಇಮ್ಮಡಿಹಳ್ಳಿ ಮತ್ತು ಚನ್ನಸಂದ್ರದಲ್ಲಿ ಸ್ಥಾಪನೆಯಾದ ಹೊಸ ಪಾಲಿಟೆಕ್ನಿಕ್‌ಗಳಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳು ಚಿಗುರಿವೆ.
- ಗುಂಜೂರು ಪಾಳ್ಯದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕಾಗಿ ೨೭ ಎಕರೆ ಜಮೀನು ಮೀಸಲಾಗಿದೆ. ಹೂಡಿಯಲ್ಲಿ ಮಿನಿ ಕ್ರೀಡಾಂಗಣ ಅಭಿವೃದ್ಧಿಯಾಗಿದೆ. ಮಾರತ್‌ಹಳ್ಳಿ ಸರ್ಕಾರಿ ಶಾಲೆಗೆ ಮತ್ತು ಉರ್ದು ಶಾಲೆಗೆ, ಕಾಡುಗೋಡಿ ಉರ್ದು ಶಾಲೆಗೆ ಸರ್ಕಾರಿ ಜಮೀನು ಕಾಯ್ದಿರಿಸಿದೆ.
- ದೊಡ್ಡನೆಕ್ಕುಂದಿ, ಜ್ಯೋತಿಪುರ ಮತ್ತು ಕನ್ನಮಂಗಲ ಪ್ರೌಢಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಆರಂಭವಾಗಿದೆ. ದೊಡ್ಡಬನಹಳ್ಳಿಯಲ್ಲಿ ಪ್ರೌಢಶಾಲೆ ಸ್ಥಾಪನೆಯಾಗಿದೆ.
- ಕ್ಷೇತ್ರದ ಹಲವು ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳು ಬಂದಿವೆ. ಹಾಗೆಯೇ ತೂಬರಹಳ್ಳಿಯಲ್ಲಿ ವಿಶಿಷ್ಟ ಇ-ಗ್ರಂಥಾಲಯದ ನಿರ್ಮಾಣ ಮುಕ್ತಾಯದ ಹಂತದಲ್ಲಿದೆ. ಹಾಲನಾಯಕನಹಳ್ಳಿ ಗ್ರಂಥಾಲಯವು ಆರಂಭವಾಗಿದೆ. ಬಿಳಿಶಿವಾಲೆಗೆ ಗ್ರಂಥಾಲಯ ಮಂಜೂರಾಗಿದ್ದು ಕಾಮಗಾg ಆರಂಭವಾಗಲಿದೆ.
ನೀರು, ಚರಂಡಿ, ಬೀದಿ ದೀಪ, ವಿದ್ಯುತ್ – ಮೂಲಭೂತ ಸೌಕರ್ಯಗಳು
- ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿನ ಕೆಲವು ಪ್ರದೇಶಗಳಿಗೆ ವಿದ್ಯುತ್ ಸೌಕರ್ಯವೇ ಇರಲಿಲ್ಲ! ಅಲ್ಲೆಲ್ಲ ಈಗ ಬೆಳಕು ಮೂಡಿದೆ. ವಿಮಾನಗಳ ಬೆಳಕಿನಲ್ಲೇ ಬದುಕು ಸವೆಸುತ್ತಿದ್ದ ಬೇಲೂರು ಅಂಬೇಡ್ಕರ್ ನಗರವಾಸಿಗಳ ಮನೆಗಳಿಗೆ ಈಗ ಬೆಳಕು ಹರಿದಿದೆ.
- ವರ್ತೂರು ಕೋಡಿ, ಬೆಳ್ಳಂದೂರು ಕೋಡಿಗಳು ದಶಕಗಳಿಂದ ಕತ್ತಲಿನಲ್ಲೇ ಇದ್ದು ಅಪಾಯಕಾರಿ ಮಾರ್ಗಗಳಾಗಿದ್ದವು; ಈ ಹಾದಿಗಳಲ್ಲಿ ಈಗ ಬೀದಿದೀಪ ಅಳವಡಿಸಿದ್ದರಿಂದ ಜನತೆ ಶಾಂತಿಯಿಂದ ಸಂಚರಿಸುವಂತಾಗಿದೆ.
- ಇಬ್ಲೂರು ಜಂಕ್ಷನ್‌ನಿಂದ ಬಿಬಿಎಂಪಿ ವ್ಯಾಪ್ತಿವರೆಗೆ, ವರ್ತೂರು, ಮಾರತ್‌ಹಳ್ಳಿ, ಗರುಡಾಚಾರ್ ಪಾಳ್ಯದ ಇಸಿಸಿ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳು, ವರ್ತೂರು ಕೋಡಿಯಿಂದ ಹೋಪ್ ಫಾರಂ ವರೆಗಿನ ರಸ್ತೆ, ಕಾಡುಗೋಡಿಯ ಪ್ರಮುಖ ರಸ್ತೆಗಳು, – ಹೀಗೆ ಎಂದೆಂದೂ ಕತ್ತಲಲ್ಲೇ ಇದ್ದ ರಸ್ತೆಗಳೀಗ ಬೀದಿ ದೀಪಗಳಿಂದ ಬೆಳಕು ಕಂಡಿವೆ. ಇದರಿಂದ ಜನತೆ ನಿರ್ಭಯವಾಗಿ ಸಂಚರಿಸುವುದಕ್ಕೆ ಅನುಕೂಲವಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ೩೦ಕ್ಕೂ ಹೆಚ್ಚು ಹೈಮಾಸ್ಟ್ ದೀಪಸ್ತಂಭಗಳನ್ನು ಸ್ಥಾಪಿಸಲಾಗಿದೆ.
- ಗ್ರಾಮಾಂತರ ಭಾಗದ ೧೨ ಗ್ರಾಮಗಳಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆ ಆಗುತ್ತಿದೆ. ಇದು ಬಹುವರ್ಷಗಳ ಕನಸಾಗಿತ್ತು. ಇದಲ್ಲದೆ ಇಪಿಐಪಿ ಪ್ರದೇಶಕ್ಕೆ ಲೋಡ್ ಶೆಡಿಂಗ್ ತಪ್ಪಿಸಿ ಉತ್ತಮ ವೋಲ್ಟೆಜಿನ ವಿದ್ಯುತ್ ವಿತರಣೆಯಾಗುತ್ತಿದೆ.
- ಅಂಬಲೀಪುರ ಕೆರೆ, ಕೈಕೊಂಡರಹಳ್ಳಿ ಕೆರೆ, ಬೆಳ್ಳಂದೂರು ಕೆರೆ, ವರ್ತೂರು ಕೆರೆ, ಸಾದರಮಂಗಲ ಕೆರೆ, ಹೂಡಿ ಗ್ರಾಮದ ೨ ಕೆರೆಗಳು, ಚಿಕ್ಕನಾಯಕನಹಳ್ಳಿ ಕೆರೆ, ಕೊಡತಿ ಕೆರೆ, ಚಿನ್ನಪ್ಪನಹಳ್ಳಿ ಕೆರೆ, ಕಾಡುಗೋಡಿ ವಾರ್ಡಿನ ಎಲ್ಲಾ ಕೆರೆಗಳು, ರಾಮಪುರ ಕೆರೆ, ಸೀತಾರಾಮಪಾಳ್ಯ ಕೆರೆ, ಗರುಡಾಚಾರ್ ಪಾಳ್ಯದ ೨ ಕೆರೆಗಳು, – ಹೀಗೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಹುತೇಕ ಕೆರೆಗಳಿಗೆ ಚೈನ್ ಲಿಂಕ್ ಫೆನ್ಸಿಂಗ್ ಮೂಲಕ ರಕ್ಷಣೆ ಒದಗಿಸಲಾಗಿದೆ. ಹಲವೆಡೆ ಹಿಂದೆಂದೂ ಕಾಣದಿದ್ದ ವಾಯುವಿಹಾರ ಕಾಲುದಾರಿಗಳು ನಿರ್ಮಾಣಗೊಂಡಿವೆ. ಯಮಲೂರು, ರಾಂಪುರ ಕೆರೆಗಳಿಗೆ ಸೇತುವೆಗಳನ್ನು ಕಟ್ಟಲಾಗಿದೆ.
- ದೊಡ್ಡನೆಕ್ಕುಂದಿಯ ಎಇಸಿಎಸ್ ಮತ್ತು ಬಿಇಎಂಎಲ್ ಬಡಾವಣೆಗಳಲ್ಲಿ, ಹರಳೂರಿನಲ್ಲಿ, ಕಾಡುಗೋಡಿಯಲ್ಲಿ ಹೊಸ ಉದ್ಯಾನವನಗಳು ಮೂಡಿವೆ.
- ಆವಲಹಳ್ಳಿ, ಕಾಡುಗೋಡಿ, ವರ್ತೂರು ಮತ್ತು ದೊಡ್ಡನೆಕ್ಕುಂದಿ ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿಗೊಂಡು ೨೪ಘಿ೭ ಗಂಟೆಗಳ ಸೇವೆ ನೀಡುತ್ತಿದೆ. ಮಂಡೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಾಗಿದೆ.
- ಕಾಡುಗೋಡಿಯಲ್ಲಿ ಬಸ್ ನಿಲ್ದಾಣ ಆರಂಭವಾಗಿದೆ; ಗುಂಜೂರು-ಕೊಡತಿಗಳಲ್ಲಿ ಬಸ್ ಡಿಪೋಗಳು ಬಂದಿವೆ; ಐಟಿಪಿಎಲ್‌ನಲ್ಲಿ ಟಿಟಿಎಂಸಿ ಮೇಲೆದ್ದಿದೆ.
- ಹಲವು ಬಡಾವಣೆಗಳಿಗೆ ಕನಸಾಗಿದ್ದ ಕಾವೇರಿ ನೀರಿನ ಸಂಪರ್ಕ ನನಸಾಗಿದೆ. ನೀರೇ ಕಾಣದಿದ್ದ ಪ್ರದೇಶಗಳಲ್ಲಿ ಕೊಳವೆ ಬಾವಿಗಳು ಬಂದಿವೆ.
- ಎಲ್ಲಾ ಸೌಲಭ್ಯಗಳಿಂದ ವಂಚಿತವಾಗಿದ್ದ ಕಾವೇರಿನಗರ ಕೊಳಚೆ ಪ್ರದೇಶವು ಈಗ ರಸ್ತೆ, ಚರಂಡಿ, ಬೀದಿದೀಪಗಳನ್ನು ಹೊಂದಿದೆ; ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯಾಗಿದೆ. ಇಲ್ಲೂ ಒಂದು ಸ್ತ್ರೀಶಕ್ತಿ ಭವನ ಬಂದಿದೆ. ಇಲ್ಲಿನ ರಾಜಾಕಾಲುವೆಗೆ ಮೋರಿ ನಿರ್ಮಾಣವಾಗಿದೆ.
- ಇದೇ ಮೊದಲ ಬಾರಿಗೆ ಕೋದಂಡರಾಮನಗರ, ಹಾಲನಾಯಕನಹಳ್ಳಿ, ಚಿಕ್ಕನಾಯಕನಹಳ್ಳಿ, ಹಾಡೋಸಿದ್ದಾಪುರ, ಹಿರಂಡಹಳ್ಳಿ, ಬಿದರಹಳ್ಳಿ, ಕಟ್ಟುಗೊಲ್ಲಹಳ್ಳಿ, ಗೊರವಿಗೆರೆ, ಆವಲಹಳ್ಳಿ ಹಾಗೂ ಇನ್ನತರ ಗ್ರಾಮಗಳಲ್ಲಿ ಮೇಲುತೊಟ್ಟಿಗಳ ನಿರ್ಮಾಣವಾಗಿದೆ.
- ಸೀತಾರಾಂ ಪಾಳ್ಯ – ಬಸವಣ್ಣನಗರ – ಐಟಿಪಿಎಲ್ ರಸ್ತೆ – ಹೂಡಿವರೆಗೆ ರಸ್ತೆ-ಚರಂಡಿ ಕಾಮಗಾರಿಗಳನ್ನು ಮಾಡಲಾಗಿದೆ.
- ಕೈಕೊಂಡರಹಳ್ಳಿಯಲ್ಲಿ ಪಿಪಿಪಿ ಮಾದರಿಯಲ್ಲಿ ಅತ್ಯಾಧುನಿಕ ಅಗ್ನಿಶಾಮಕ ಠಾಣೆಯು ಕಾರ್ಯನಿರತವಾಗಿದೆ. ಚನ್ನಸಂದ್ರದಲ್ಲೂ ಇಂಥ ಅಗ್ನಿಶಾಮಕ ಠಾಣೆಗೆ ಜಮೀನು ಕಾಯ್ದಿರಿಸಿದೆ.
- ವರ್ತೂರು ಮಾರುಕಟ್ಟೆಗಾಗಿ ಬಹುವರ್ಷಗಳಿಂದ ಇದ್ದ ಬೇಡಿಕೆಯು ಪೂರ್ಣಗೊಂಡಿದ್ದು ಜಾಗ ಮೀಸಲಾಗಿದೆ. ಸದ್ಯದಲ್ಲೇ ಮಾರುಕಟ್ಟೆ ನಿರ್ಮಾಣವಾಗಲಿದೆ.
ಮಹದೇವಪುರದ ಜನತೆಯು ಮೂವತ್ತು ವರ್ಷಗಳಿಂದ ಕಾಣದ ಹಲವು ಸೌಕರ್ಯಗಳನ್ನು ನೀಡಿದ ಹೆಮ್ಮೆ ಅರವಿಂದ ಲಿಂಬಾವಳಿಯವರದು. ಹಾಗಂತ ಇಷ್ಟಕ್ಕೇ ಎಲ್ಲವೂ ಮುಗಿದಿಲ್ಲ ಎಂಬ ಅರಿವೂ ಅವರಿಗಿದೆ. ಮುಂದಿನ ದಿನಗಳಲ್ಲಿ ಉಳಿದೆಲ್ಲ ಅಗತ್ಯಗಳನ್ನೂ ಪೂರೈಸುವತ್ತ ಅವರ ನೀಲನಕಾಶೆ ಸಿದ್ಧವಾಗಿದೆ.
ಕಾದಿದ್ದರು ೩೦ ವರ್ಷ; ಈಗ ಮೂಡಿತು ಹರ್ಷ!
Coexistence of Peace and harmony; reduced crime rate
Though average crime rate of Bangalore increased periodically, crime rate in Mahadevapura on contrary is reduced by 25%! All the more, Dalits, Hindus and Muslims live in peace and harmony in the constituency. It is a unique development in the state. Coexistence of peace and harmony is the specialty of Mahadevapura.
Revolution of Roads
- HAL main road to Doddanekkundi , outer ring road, Chinnappanahalli Layout, Alpine Apartments, construction of ITPL road via Graphite India has reduced Traffic density and distances in Marath Halli and Kundalahalli junctions. The travel time has been reduced considerably. Many roads have been developed in Dodda nekkundi ward, similarly roads in Kadugodi have improved.
- Development of the road that leads to Kadugodi from NH4 via k Dommasandra, Kurudusonnenahalli, Belaturu has become the main connecting road to ITPL .
- Construction of road from Avalahalli to Bagalur through Bilishivale, Rampura, Hirandahalli has facilitated smooth and easy journey to Bangalore International Airport. Also the road from Dommasandra through Sulikunte, Chikkanayakana Halli Dinne to Parappana Agrahara has seen unprecedented development. The roads of Kodandarama Nagar have recently been developed.
- Many roads have been developed in Hagadur ward including the link road from Siddapura to whitefield through nalluralli and a link road from whitefield through hagaduru, immadihalli, Nagondanahalli to Channasandra (Chikka Tirupati road)
- The construction of outer ring road from Sarjapur road via Gear college- Devarabissanahalli route has reduced the distance by 4 KMs. Roads in Hoodi, Ayyappa Nagara, Varanasi, Bilishivale, Bairati, Bairati Bande, Belaturu and Belaturu colonies have been improved very recently.
- The road from outer ring
- road which joins ITPL road through Chinnappanahalli, Kundalahalli colony has also been developed resulting in reduced travel time.
- The road from TC playa main road through Varanasi to k Channasandra is also developed
- Fly over work near Bellanduru and Devarabissana Halli off outer ring road
- and an under pass work in Kadubisanahalli are in progress
They waited for 30 years; now share the happiness
- Main connecting roads of all the villages of Avalahalli, Manduru and Bidarahalli ward have been improved. 11 important roads of these three wards have been upgraded and developed by PWD. Kannuru main road has also been developed.
- 10 KMs travel distance is reduced due to the road from National high way through Veerena Halli, Doddabanahalli to HKA road
- The road from Parappana Agrahara main road to Doddakannalli through Maata Amrutaanandamayee College, Kodandarama Nagar, Amrut Nagar, tank bund, Someshwara lay out is also in progress. This also happens to be an important interlinking road
- Also the road from Kittaganuru, Halehalli, Haaragondanahalli, K Channasandra to Bilishivale has brought big relief to the people of that region
- The public have already been using the main connecting bridge near Immadihalli Karumaariyamma temple on Whitefield – Channasandra road, the bridge on the road to Rampura burial ground and the bridge near Alfa college near Dodda Gubbi. Bridge construction to Bellanduru lake near Yamalur is underway. Link has been established to the road from NH 4 through Kittaganur to the Bairati – Avalahalli road near Bidarahalli by erecting a bridge to the lake near Kittaganuru.
- Ayyappanagar had only mud roads; not to mention about drainage facility; now 5 crore work is under way in that area
- Ayyappanagar – Kodigehalli- Sadaramangala- Belaturu parallel road has changed the whole environment of the surrounding areas which eventually have witnessed real estate boom.
- Earlier road from ITPL to Raja Palya , Tigalara Palya was very narrow; the road was widened by convincing the private land owners by which the important bottleneck has been removed.
Distribution of title deeds
A long pending title deed distribution work is now an ongoing exercise in the constituency. The anguish of getting a proper title deed under Government rules is no more. Their waiting has Bore fruits and now legally entitled persons can get their title deeds easily; now they celebrate their happiness. Title deeds have been distributed to those who have been dwelling for the past 30 years in the houses built on Government land in Devarabissanahalli, Kempapura colony, Goravigere, Kannamangala Dinne , Huskuru Kodi, Basavanna Nagara, Cauvery Nagara, Vijayanagara, Gandhipura and other villages. Title deeds are being distributed to those who are residing in more than 70 Government land areas. The residents of Chowlukere bund are being given title deeds and are being shifted to the houses built by Slum development board in Varturu village. Also the poor urban dwellers in the constituency are identified and are being shifted to the houses built by Slum Development Board in Sadaramangala and Varturu.
Revolution in Education sector
- Government Degree colleges have been established at Varturu and Kadugodi which receive more number of young girls than boys. Dedicated teaching staff has succeeded in improving result by quality teaching.
- Opening new polytechnics in Immadihalli and Channasandra have cherished future dreams in students.
- 27 acres land has been reserved for international stadium in Gunjuru Palya. Mini stadium has been developed in Hoodi. Government land has been reserved for Government School and Urdu school in Marath Halli and for Urdu school in Kadugodi.
- English medium is started in high schools in Doddanekkundi, Jyotipura and Kannamangala high schools. Government high school has been established in Doddabanahalli.
- Additional class rooms have been constructed in many Government schools in the constituency. Construction of a unique e- library is nearing completion in Tubarahalli. New library has been started in Haalanayakanahalli. Construction work of newly sanctioned library in Bilishivale will commence soon.
Water, sewage system, streetlight, power – the basic infrastructure:
Some localities did not have electricity supply since independence. Now lights are illuminating all those areas. The houses of Beluru Ambedkar Nagar localities which were receiving the light from flights of HAL are now bright with electricity lights!
- Even having street lights was dream for decades! Sensitive places of tank bund area of Varturu, Bellandur now are bright with street lights; people can walk any time without fear.
- Roads from Ibluru junction to BBMP limits, many important roads including roads in Marath Halli , ECC road of Garudachar Palya , road from Varturu Kodi to Hope Farm, important roads of Kadugodi, which had never seen the electricity lights are now illuminated with street lights which has enabled people to move without fear. More than 30 high mast lights have been installed in the constituency.
- Uninterrupted and quality power is being supplied to 12 villages in the rural area which was a dream of many years. Load shedding is avoided in EPIP area and quality voltage power is being supplied.
- Many lakes in the constituency including lakes of Ambalipura, Kaikondarahalli, Bellanduru, Varturu, Saadaramangala, Chikkanayakanahalli, Kodati, Chinnappanahalli, 2 lakes of Hoodi village, all the lakes of Kadugodi ward, Ramapura lake, Sitaramapalya lake, 2 lakes of Garudachar Palya are protected by chain link fencing. In many lakes walkways have been constructed which were unheard before. Bridges have been built to Yamaluru and Rampura lakes.
- New gardens have come up in AECS and BEML layouts in Doddanekkundi, Haraluru and Kadugodi.
- Government hospitals in Avalahalli, Kadugodi, Varturu and Doddanekkundi have been developed and have been offering services round the clock. Primary health centre is established in Manduru.
- Bus stand has started operation in Kadugodi, bus depots have been started in Gunjuru- Kodati; TTMC has come up in ITPL.
- To get Cauvery water for drinking was the dream of the constituency. Now it is reality for some of the localities. To address the acute shortage of water, Bore wells has been provided in some localities.
- Cauvery Nagara slum which had been deprived of all facilities now has roads, sewage system, street lights now, title deeds have been distributed to the residents. Stree Shakti Bhavan has also been built, drainage has been constructed to Raja canal.
- For the first time water tanks have been constructed in Kodandarama Nagar, Halanayakana Halli, Chikkanayakana Halli, Haadosiddapura, Hiranda Halli, Bidarahalli, Kattugolla Halli, Goravigere, Avalahalli and in other villages.
- Roads, sewage systems have been provided to Sitaram Palya – Basavana Nagar- ITPL road till Hoodi
- Well equipped fire station on PPP model is functional in Kaikondarahalli. Land has been reserved for such fire station in Channasandra also.
- Many years demand for market yard in Varturu has been fulfilled and the land has been earmarked, market will be built soon.
- Arvind Limbavali is proud to fulfil three decade’s aspirations of the people. However, he is fully aware that it is not the end of the journey. He has a future development blue print for Mahadevapura.(See page 68)
They waited for 30 years; now share the happiness
ಸಾಧನೆಗಳು ೨೦೦೮-೧೩ – Achievements 2008-13
- ಸಾಧನೆಯ ಹಾದಿಯಲ್ಲಿ ಶಿಕ್ಷಣ ಕ್ಷೇತ್ರ – Education sector: A spectacular achievement - ಕರ್ನಾಟಕ ರಾಜ್ಯವು ಹಲವು ದಶಕಗಳಿಂದಲೂ ದೇಶದಲ್ಲೇ ಮುಂಚೂಣಿಯಲ್ಲಿರುವ ಉನ್ನತ ಶಿಕ್ಷಣ ಕೇಂದ್ರವಾಗಿದೆ. ಅದರಲ್ಲೂ ಎಂಬತ್ತರ ದಶಕದಿಂದೀಚೆಗೆ ಕರ್ನಾಟಕದಲ್ಲಿ ನೂರಾರು ಕಾಲೇಜುಗಳು ಸ್ಥಾಪನೆಗೊಂಡಿವೆ. ೨೦೦೮ರ ಹೊತ್ತಿಗೆ ಶಿಕ್ಷಣ ರಂಗವು ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿತ್ತು. ದೇಶದ ಮಾನವ ಸಂಪನ್ಮೂಲವನ್ನು ಸಮೃದ್ಧಗೊಳಿಸುವ ಈ ಕಾಯಕದಲ್ಲಿ ಅರವಿಂದ ಲಿಂಬಾವಳಿಯವರು ಗರಿಷ್ಠ ಪ್ರಮಾಣದ ರಚನಾತ್ಮಕ, ಗುಣಾತ್ಮಕ ಬದಲಾವಣೆಗಳನ್ನು ತಂದರು. ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲಾವಧಿಯಲ್ಲಿ ತಳೆದ ನಿರ್ಣಯಗಳು, ರೂಪಿಸಿದ ಕಾರ್ಯಕ್ರಮಗಳು, ಜಾರಿಗೆ ತಂದ ವಿನೂತನ ಉಪಕ್ರಮಗಳೇ ಅವರ ಯಶಸ್ಸಿಗೆ ನಿದರ್ಶನಗಳಾಗಿವೆ. ಕಾಲೇಜು… Continue Reading
- ಶಿಬಿರ,ಮೇಳ,ಉತ್ಸವಗಳ ಸರಮಾಲೆ – A continuous series of Fairs and Festivals - ಮಹದೇವಪುರ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹತ್ತು ಹಲವು ಮೇಳಗಳು ನಡೆದಿವೆ. ನಾಡಿನ ಮಹಾಪುರುಷರ ಜಯಂತಿಗಳನ್ನೂ ವಿಜೃಂಭಣೆಯಿಂದ ಆಚರಿಸಲಾಗಿದೆ.ಯುಗಾದಿ ಹಬ್ಬವೇ ಮಹದೇವಪುರ ಮೇಳವಾಗಿ ರೂಪಾಂತರಗೊಂಡು ಸಾವಿರಾರು ಕುಟುಂಬಗಳನ್ನು ಸೆಳೆದಿದೆ.ಕ್ಷೇತ್ರದಲ್ಲಿ ಎರಡು ಉದ್ಯೋಗ ಮೇಳಗಳು ನಡೆದವು. ಇಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಮೊದಲ ಮೇಳದಲ್ಲಿ ೭೦೦ ಜನರಿಗೆ ಉದ್ಯೋಗ ದೊರಕಿದರೆ, ನ್ಯೂ ಹಾರಿಜಾನ್ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ಎರಡನೇ ಮೇಳದಲ್ಲಿ ೮೧೦ ಜನರಿಗೆ ಕೆಲಸ ಸಿಕ್ಕಿತು.ಮೊದಲ ವರ್ಷ ಮಹದೇವಪುರದಲ್ಲಿ ಆಚರಿಸಿದ ಯುಗಾದಿ ಉತ್ಸವವು ಮರುವರ್ಷದಿಂದ `ಮಹದೇವಪುರ ಉತ್ಸವ’ವಾಗಿ… Continue Reading
- ಧಾರ್ಮಿಕತೆ, ಸಾಮರಸ್ಯದ ತಂಗಾಳಿ – A gentle breeze of religious harmony - ಸ್ವಾಮಿ ವಿವೇಕಾನಂದ, ವೇಮನ, ಕೆಂಪೇಗೌಡ, ಬಸವೇಶ್ವರ, ಕನಕದಾಸರು, ಡಾ|| ಬಿ.ಆರ್. ಆಂಬೇಡ್ಕರ್, ಬಾಬು ಜಗಜೀವನರಾಂ, ದ್ರೌಪದಮ್ಮ, ಸಿದ್ಧರಾಮೇಶ್ವರರು, ಸ್ವಾಮಿ ಯೋಗಿನಾರಾಯಣ, ಸೋದರಿ ನಿವೇದಿತಾ, ಪಂ| ದೀನದಯಾಳ ಉಪಾಧ್ಯಾಯ – ಹೀಗೆ ನಾಡಿನ ಮಹಾಪುರುಷರ ಜಯಂತಿಗಳ ಆಚರಣೆಯ ಹೊಸ ಪರಂಪರೆಯಿಂದಾಗಿ ಮಹದೇವಪುರ ಕ್ಷೇತ್ರದಲ್ಲಿ ಸಮನ್ವಯದ ಗಾಳಿ ಬೀಸಿದೆ. ಸಾಮರಸ್ಯದ ಸಂದೇಶ ಬೀರುವ ಈ ಕಾರ್ಯಕ್ರಮಗಳಲ್ಲಿ ಜನರು ಪಕ್ಷಬೇಧ ಮರೆತು ಸಾವಿರಾರು ಸಂಖ್ಯೆಯಲ್ಲಿ ಸ್ವಯಂಸ್ಫೂರ್ತಿಯಿಂದ ಭಾಗವಹಿಸಿದ್ದಾರೆ. ಬಹುಶಃ ಕ್ಷೇತ್ರವು ಶಾಂತ, ಸೌಹಾರ್ದ ವಾತಾವರಣದಿಂದಲೇ ಕೂಡಿರುವುದಕ್ಕೆ ಇಂಥ ಸಾಮಾಜಿಕ ಸಾಮರಸ್ಯದ ಆಚರಣೆಗಳೇ… Continue Reading
- ಸಾಮಾಜಿಕ ಅಭ್ಯುದಯದ ದೃಢ ಹೆಜ್ಜೆಗಳು – Firm steps in Social development. - ಯುವಕರಿಗೆ ಕೆಲಸ ದೊರಕಿಸಲು ಉದ್ಯೋಗ ಮೇಳ, ಸಾರ್ವಜನಿಕ ಬಳಕೆಗಾಗಿ ಹಲವೆಡೆ ಸಮುದಾಯ ಭವನಗಳು, ಸುರಕ್ಷತೆಗಾಗಿ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ, ಸುಸಜ್ಜಿತ ವಿದ್ಯುತ್ ಚಿತಾಗಾರ, ದುರ್ಬಲರು, ಅಶಿಕ್ಷಿತರಿಗೆ ವಿವಿಧ ಬಗೆಯ ತರಬೇತಿಗಳು, ಅಂಬೇಡ್ಕರ್ ಭವನಗಳು, ಶಿಕ್ಷಣ ನೀಡಲು ವಿವಿಧ ಶಾಲಾ-ಕಾಲೇಜುಗಳು, ನೀರು ಸಂಗ್ರಹಕ್ಕೆ ಟ್ಯಾಂಕ್‌ಗಳು, ವಿಧವಾ-ವೃದ್ಧಾಪ್ಯ ವೇತನಗಳು, ಶಾಸಕರ ಅನುದಾನದಿಂದ ವಿವಿಧ ಕಾಮಗಾರಿಗಳು – ಒಂದೆ, ಎರಡೆ? ಅರವಿಂದ ಲಿಂಬಾವಳಿಯವರು ಕ್ಷೇತ್ರದ ಸಾಮಾಜಿಕ ಅಭಿವೃದ್ಧಿಗಾಗಿ ಹಲವು ಆಯಾಮಗಳಲ್ಲಿ ಕೆಲಸ ಮಾಡಿದ್ದಾರೆ. ನಿಜವಾದ ಸರ್ವಸ್ಪರ್ಶಿ ಅಭ್ಯುದಯ ಚಿಂತನೆ ಎಂದರೆ… Continue Reading
- ಅಪಾರ್ಟ್ಮೆಂಟ್ ನಿವಾಸಿಗಳ ಬವಣೆ ಪರಿಹಾರ – Apartment residents’ problems solved - ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಅಪಾರ್ಟ್‌ಮೆಂಟ್‌ಗಳಿವೆ. ಇಲ್ಲಿನ ನಿವಾಸಿಗಳು ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಶನ್ ಸ್ಥಾಪಿಸಿಕೊಂಡಿದ್ದಾರೆ. ಅರವಿಂದ ಲಿಂಬಾವಳಿಯವರ ಬಳಿ ಅವರು ಹಲವು ಸಮಸ್ಯೆಗಳ ಬಗ್ಗೆ ನಿವೇದಿಸಿಕೊಂಡಿದ್ದರು. ಅವುಗಳಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರಕಿದೆ. ಅಲ್ಲದೆ ಹಲವೆಡೆ ಬೀದಿ ನಾಯಿಗಳ ಹಾವಳಿಯನ್ನೂ ತಪ್ಪಿಸಲಾಗಿದೆ. ಮುಖ್ಯವಾಗಿ ಅಪಾರ್ಟ್‌ಮೆಂಟ್‌ಗಳ ಸುತ್ತಮುತ್ತ ಬೇಕಾಗಿದ್ದ ಬೀದಿ ದೀಪಗಳನ್ನು ಸ್ಥಾಪಿಸಲಾಗಿದೆ. ಇದರಿಂದ ನಿವಾಸಿಗಳು ಯಾವ ಭಯವೂ ಇಲ್ಲದೆ ರಾತ್ರಿಯ ಹೊತ್ತು ಸಂಚರಿಸಬಹುದು. ಇದಲ್ಲದೆ ಹಲವು ನಿವಾಸಿಗಳಿಗೆ ಮನೆ ಖರೀದಿ ಮಾಡಿದ್ದರೂ ದೊರಕದೇ ಹೋಗಿದ್ದ ಖಾತಾಪತ್ರಗಳನ್ನು ಅರವಿಂದ… Continue Reading
- ಇಪಿಐಪಿ ಅಭಿವೃದ್ಧಿಯ ಯಶೋಗಾಥೆ – EPIP : A saga of Development - ವೈಟ್‌ಫೀಲ್ಡ್‌ನ ಇಪಿಐಪಿ ವಲಯದಲ್ಲಿ ರಸ್ತೆ, ಮಳೆ ನೀರು ಕೊಯ್ಲು, ಕಾಲುದಾರಿ ಸುಧಾರಣೆ ಮತ್ತು ಡಾಂಬರೀಕರಣದ ಕೆಲಸಗಳು ಭರದಿಂದ ಸಾಗಿವೆ. ಇಲ್ಲಿನ ನಾಲ್ಕು ಸಾಲಿನ (೪ ಲೇನ್) ೫.೫ ಕಿಮೀ ಉದ್ದದ ಆಂತರಿಕ ಹೆದ್ದಾರಿಯನ್ನು ಅಸ್ಫಾಲ್ಟ್ ಮಾಡುವ ಕೆಲಸಕ್ಕೆ ೧೬.೪೦ ಕೋಟಿ ರೂ.ಗಳ ಬಿಡುಗಡೆಯಾಗಿದ್ದು ಕಾಮಗಾರಿಯು ಪ್ರಗತಿಯಲ್ಲಿದೆ. ಹಾಗೆಯೇ ಇಲ್ಲಿ ೪.೫೦ ಕಿಮೀ ಉದ್ದದ ೨ ಸಾಲಿನ (೨ ಲೇನ್) ಆಂತರಿಕ ಹೆದ್ದಾರಿಯ ಕಾಮಗಾರಿಯೂ ಪ್ರಗತಿಯಲ್ಲಿದೆ. ಇಪಿಐಪಿ ವಲಯದ ಬಳಿ ಇರುವ ಗ್ರಾಫೈಟ್ ಇಂಡಿಯಾ ಜಂಕ್ಷನ್‌ನಲ್ಲಿ ದ್ವಿಮುಖ ಸಂಚಾರದ… Continue Reading
- ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ – Improvement in Transport system - ಕಳೆದ ನಾಲ್ಕು ವರ್ಷಗಳಲ್ಲಿ ಮಹದೇವಪುರದ ಸಾರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ರೂಪಾಂತರಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಮಹದೇವಪುರಕ್ಕೆ ಪ್ರತಿ ನಿಮಿಷಕ್ಕೆ ಒಂದರಂತೆ ವೋಲ್ವೋ ಬಸ್ (ಸಂಖ್ಯೆ ೩೩೫ಇ) ಸೌಕರ್ಯವನ್ನು ಒದಗಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಬೆಂಗಳೂರು ನಗರಕ್ಕೆ ಬಂದು ಹೋಗಬಹುದು. ಇಪಿಐಪಿ ಪ್ರದೇಶದಲ್ಲಿ ೩೬ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಟಿಟಿಎಂಸಿ ಬಸ್ ನಿಲ್ದಾಣವನ್ನು ಸ್ಥಾಪಿಸಲಾಗಿದೆ. ಕೊಡತಿ ಮತ್ತು ಗುಂಜೂರಿನಲ್ಲಿ ಹೊಸದಾಗಿ ಬಸ್ ಡಿಪೋಗಳನ್ನು ನಿರ್ಮಿಸಲಾಗಿದೆ. ಈ ಡಿಪೋಗಳು ಸದ್ಯದಲ್ಲೇ ಕಾರ್ಯಾಚರಿಸಲಿವೆ. ಗ್ರಾಮೀಣ ಭಾಗಕ್ಕೂ… Continue Reading
- ಆರೋಗ್ಯಕ್ಕೆ ಆದ್ಯತೆ – Priority to Health - ಈಗ ಆರೋಗ್ಯ ಸಚಿವರಾಗಿರುವ ಅರವಿಂದ ಲಿಂಬಾವಳಿಯವರು ಮಹದೇವಪುರದ ಶಾಸಕರಾದ ಕ್ಷಣದಿಂದಲೂ ಸ್ವಾಸ್ಥ್ಯವನ್ನು ಅತ್ಯಂತ ಜತನದಿಂದ ನೋಡಿಕೊಂಡಿದ್ದಾರೆ. ಎರಡು ಮೆಗಾ ಹೆಲ್ತ್ ಕ್ಯಾಂಪ್‌ಗಳೂ ಸೇರಿದಂತೆ ಆರು ವೈದ್ಯಕೀಯ ಶಿಬಿರಗಳು ನಡೆದಿವೆ. ವರ್ತೂರಿನಲ್ಲಿ ನಡೆದ ಮೊದಲ ಮೆಗಾ ಹೆಲ್ತ್ ಕ್ಯಾಂಪಿನಲ್ಲಿ ೧೩೭೦೦ ರೋಗಿಗಳನ್ನು ಉಚಿತ ಬಸ್ ವ್ಯವಸ್ಥೆಯ ಮೂಲಕ ಕರೆತಂದು ಎರಡು ದಿನ ಊಟದ ವ್ಯವಸ್ಥೆಯನ್ನೂ ಮಾಡಿ, ಹತ್ತು ದಿನಗಳಿಗಾಗುವಷ್ಟು ಔಷಧಗಳನ್ನೂ ಉಚಿತವಾಗಿ ನೀಡಿದ ಅಗ್ಗಳಿಕೆ ಅರವಿಂದ ಲಿಂಬಾವಳಿಯವರ ಸಂಘಟನಾ ಸಾಮರ್ಥ್ಯಕ್ಕೆ ದೊರಕುವ ನಿದರ್ಶನ. ಇತ್ತೀಚೆಗಷ್ಟೆ ಕಾಡುಗೋಡಿಯಲ್ಲಿ ಎರಡನೇ ಬೃಹತ್… Continue Reading
- ಅಕ್ಷರ ಕ್ರಾಂತಿಯ ಹೊಸ ಅಧ್ಯಾಯ – Revolution in the field of Education: A novel experiment - ಅರವಿಂದ ಲಿಂಬಾವಳಿ ಶಿಕ್ಷಣ ರಂಗದಲ್ಲೇ ಹೋರಾಟ ಮಾಡುತ್ತಲೇ ಬೆಳೆದ ಯುವ ನಾಯಕರು. ಶಾಸಕರಾದ ಮೇಲೆ ಮಹದೇವಪುರದಲ್ಲಿ ಶಿಕ್ಷಣ ಕ್ರಾಂತಿಗೆ ಅವರು ಮಾಡಿದ ಯತ್ನಗಳನ್ನು ಕಣ್ಣಾರೆ ಕಾಣಬಹುದು. ವರ್ತೂರು ಮತ್ತು ಕಾಡುಗೋಡಿ – ಒಟ್ಟು ಎರಡು ಪದವಿ ಕಾಲೇಜುಗಳು ಕ್ಷೇತ್ರಕ್ಕೆ ಬಂದಿವೆ. ಬೆಂಗಳೂರಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಎಂದರೆ ಎಸ್ ಜೆ ಪಾಲಿಟೆಕ್ನಿಕ್ ಮಾತ್ರ ಎಂದೇ ಮಾತಿರುವಾಗ ಕಾಡುಗೋಡಿ ವಾರ್ಡಿನ ಚನ್ನಸಂದ್ರ, ಹಗದೂರು ವಾರ್ಡಿನ ಇಮ್ಮಡಿಹಳ್ಳಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕೂಡಾ ಸ್ಥಾಪನೆಯಾಗಿವೆ. ಎಲ್ಲದಕ್ಕೂ ನಿವೇಶನಗಳೂ ಇವೆ; ಕಟ್ಟಡಗಳ ನಿರ್ಮಾಣ ಆರಂಭವಾಗಬೇಕಿದೆ.… Continue Reading
- ಮನೆಗೆ ದೀಪ, ಬೀದಿಗೆ ಬೆಳಕು – Lights to Houses as well to streets - ೨೦೦೮ರಲಿ ಮಹದೇವಪುರ ಕ್ಷೇತ್ರದ ಹಲವು ಪ್ರದೇಶಗಳು ಬೀದಿ ದೀಪಗಳಿಂದ ವಂಚಿತವಾಗಿದ್ದವು. ವಿದ್ಯುತ್ ಲೈನ್‌ಗಳೂ ಇಲ್ಲ, ಕಂಬಗಳೂ ಇಲ್ಲದಂಥ ಸ್ಥಿತಿ. ಅರವಿಂದ ಲಿಂಬಾವಳಿಯವರು ವಿದ್ಯುತ್ ಸಂಪರ್ಕ, ಬೀದಿ ದೀಪ, ಗುಣಮಟ್ಟದ ವಿದ್ಯುತ್, ಗ್ರಾಮೀಣ ಪ್ರದೇಶಕ್ಕೂ ನಗರಮಟ್ಟದ ವಿದ್ಯುತ್ – ಹೀಗೆ ಎಲ್ಲ ಅಗತ್ಯಗಳನ್ನೂ ಪೂರೈಸುವಲ್ಲಿ ಯಶ ಪಡೆದಿದ್ದಾರೆ. ಎಲ್ಲಾ ಪ್ರಮುಖ ರಸ್ತೆಗಳಲ್ಲಿ, ಗಲ್ಲಿ ರಸ್ತೆಗಳಲ್ಲಿ ಸಾರ್ವಜನಿಕರು ನಿರ್ಭಯವಾಗಿ ಸಂಚರಿಸಲು ಅನುಕೂಲವಾಗುವಂತೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಪ್ರಮುಖ ಬೀದಿಗಳಲ್ಲಿ ಎರಡೂ ಬದಿ ಚಾಚಿರುವ ಸೋಡಿಯಂ ದೀಪಗಳ ಸ್ತಂಭಗಳನ್ನು ಸ್ಥಾಪಿಸಿ ಎಲ್ಲ… Continue Reading