ಸ್ವಾಮಿ ವಿವೇಕಾನಂದ, ವೇಮನ, ಕೆಂಪೇಗೌಡ, ಬಸವೇಶ್ವರ, ಕನಕದಾಸರು, ಡಾ|| ಬಿ.ಆರ್. ಆಂಬೇಡ್ಕರ್, ಬಾಬು ಜಗಜೀವನರಾಂ, ದ್ರೌಪದಮ್ಮ, ಸಿದ್ಧರಾಮೇಶ್ವರರು, ಸ್ವಾಮಿ ಯೋಗಿನಾರಾಯಣ, ಸೋದರಿ ನಿವೇದಿತಾ, ಪಂ| ದೀನದಯಾಳ ಉಪಾಧ್ಯಾಯ – ಹೀಗೆ ನಾಡಿನ ಮಹಾಪುರುಷರ ಜಯಂತಿಗಳ ಆಚರಣೆಯ ಹೊಸ ಪರಂಪರೆಯಿಂದಾಗಿ ಮಹದೇವಪುರ ಕ್ಷೇತ್ರದಲ್ಲಿ ಸಮನ್ವಯದ ಗಾಳಿ ಬೀಸಿದೆ. ಸಾಮರಸ್ಯದ ಸಂದೇಶ ಬೀರುವ ಈ ಕಾರ್ಯಕ್ರಮಗಳಲ್ಲಿ ಜನರು ಪಕ್ಷಬೇಧ ಮರೆತು ಸಾವಿರಾರು ಸಂಖ್ಯೆಯಲ್ಲಿ ಸ್ವಯಂಸ್ಫೂರ್ತಿಯಿಂದ ಭಾಗವಹಿಸಿದ್ದಾರೆ. ಬಹುಶಃ ಕ್ಷೇತ್ರವು ಶಾಂತ, ಸೌಹಾರ್ದ ವಾತಾವರಣದಿಂದಲೇ ಕೂಡಿರುವುದಕ್ಕೆ ಇಂಥ ಸಾಮಾಜಿಕ ಸಾಮರಸ್ಯದ ಆಚರಣೆಗಳೇ ಕಾರಣ. ಸಮಾಜಕ್ಕೆ ಸಂದೇಶ ನೀಡುವ ಇಂಥ ಮಹಾಪುರುಷರ ಜಯಂತಿಗಳನ್ನು ಆಚರಿಸುವ ಪರಂಪರೆಗೆ ಅರವಿಂದ ಲಿಂಬಾವಳಿ ನಾಂದಿ ಹಾಡಿದ್ದಾರೆ.
Because of a new tradition of celebrating the birth anniversaries of great people like Swami Vivekananda, Vemana, Kempegowda, Basaveshwara, Kanakadasa, Dr.B.R.Ambedkar, Babu Jagajeevanaram, Draupadamma, Siddarameshwara, Swami yogi Narayana, Sister Nivedita, Pandit Deendayal Upadhyaya, you can see a new wave of communal harmony in Mahadevapura. Such programs which spread the message of unity attract a large number of people. They participate voluntarily irrespective of their political affiliations. Perhaps such celebrations of social harmony might be the reason for peace and harmony in Mahadevapura.. Arvind Limbavali has initiated this tradition of celebrating the birth anniversaries of various great people that give message to society.
ಸಾಧನೆಗಳು ೨೦೦೮-೧೩ – Achievements 2008-13
- ಸಾಧನೆಯ ಹಾದಿಯಲ್ಲಿ ಶಿಕ್ಷಣ ಕ್ಷೇತ್ರ – Education sector: A spectacular achievement - ಕರ್ನಾಟಕ ರಾಜ್ಯವು ಹಲವು ದಶಕಗಳಿಂದಲೂ ದೇಶದಲ್ಲೇ ಮುಂಚೂಣಿಯಲ್ಲಿರುವ ಉನ್ನತ ಶಿಕ್ಷಣ ಕೇಂದ್ರವಾಗಿದೆ. ಅದರಲ್ಲೂ ಎಂಬತ್ತರ ದಶಕದಿಂದೀಚೆಗೆ ಕರ್ನಾಟಕದಲ್ಲಿ ನೂರಾರು ಕಾಲೇಜುಗಳು ಸ್ಥಾಪನೆಗೊಂಡಿವೆ. ೨೦೦೮ರ ಹೊತ್ತಿಗೆ ಶಿಕ್ಷಣ ರಂಗವು ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿತ್ತು. ದೇಶದ ಮಾನವ ಸಂಪನ್ಮೂಲವನ್ನು ಸಮೃದ್ಧಗೊಳಿಸುವ ಈ ಕಾಯಕದಲ್ಲಿ ಅರವಿಂದ ಲಿಂಬಾವಳಿಯವರು ಗರಿಷ್ಠ ಪ್ರಮಾಣದ ರಚನಾತ್ಮಕ, ಗುಣಾತ್ಮಕ ಬದಲಾವಣೆಗಳನ್ನು ತಂದರು. ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲಾವಧಿಯಲ್ಲಿ ತಳೆದ ನಿರ್ಣಯಗಳು, ರೂಪಿಸಿದ ಕಾರ್ಯಕ್ರಮಗಳು, ಜಾರಿಗೆ ತಂದ ವಿನೂತನ ಉಪಕ್ರಮಗಳೇ ಅವರ ಯಶಸ್ಸಿಗೆ ನಿದರ್ಶನಗಳಾಗಿವೆ. ಕಾಲೇಜು… Continue Reading
- ಶಿಬಿರ,ಮೇಳ,ಉತ್ಸವಗಳ ಸರಮಾಲೆ – A continuous series of Fairs and Festivals - ಮಹದೇವಪುರ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹತ್ತು ಹಲವು ಮೇಳಗಳು ನಡೆದಿವೆ. ನಾಡಿನ ಮಹಾಪುರುಷರ ಜಯಂತಿಗಳನ್ನೂ ವಿಜೃಂಭಣೆಯಿಂದ ಆಚರಿಸಲಾಗಿದೆ.ಯುಗಾದಿ ಹಬ್ಬವೇ ಮಹದೇವಪುರ ಮೇಳವಾಗಿ ರೂಪಾಂತರಗೊಂಡು ಸಾವಿರಾರು ಕುಟುಂಬಗಳನ್ನು ಸೆಳೆದಿದೆ.ಕ್ಷೇತ್ರದಲ್ಲಿ ಎರಡು ಉದ್ಯೋಗ ಮೇಳಗಳು ನಡೆದವು. ಇಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಮೊದಲ ಮೇಳದಲ್ಲಿ ೭೦೦ ಜನರಿಗೆ ಉದ್ಯೋಗ ದೊರಕಿದರೆ, ನ್ಯೂ ಹಾರಿಜಾನ್ ಕಾಲೇಜು ಕ್ಯಾಂಪಸ್ನಲ್ಲಿ ನಡೆದ ಎರಡನೇ ಮೇಳದಲ್ಲಿ ೮೧೦ ಜನರಿಗೆ ಕೆಲಸ ಸಿಕ್ಕಿತು.ಮೊದಲ ವರ್ಷ ಮಹದೇವಪುರದಲ್ಲಿ ಆಚರಿಸಿದ ಯುಗಾದಿ ಉತ್ಸವವು ಮರುವರ್ಷದಿಂದ `ಮಹದೇವಪುರ ಉತ್ಸವ’ವಾಗಿ… Continue Reading
- ಕಾದಿದ್ದರು ೩೦ ವರ್ಷ; ಈಗ ಮೂಡಿತು ಹರ್ಷ!- They waited for 30 years Now share the happiness! - ಎಲ್ಲೆಲ್ಲೂ ಶಾಂತಿ-ಸೌಹಾರ್ದ; ಅಪರಾಧ ಪ್ರಮಾಣ ಇಳಿಕೆ: ಬೆಂಗಳೂರು ನಗರದ ಸರಾಸರಿ ಅಪರಾಧ ಪ್ರಮಾಣ ಹೆಚ್ಚಾಗುತ್ತಿದ್ದರೆ, ಮಹದೇವಪುರ ಕ್ಷೇತ್ರದಲ್ಲಿ ಅಪರಾಧಪ್ರಮಾಣವು ಏನಿಲ್ಲೆಂದರೂ ಶೇ. ೨೫ರಷ್ಟು ಕಡಿಮೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಕ್ಷೇತ್ರದಲ್ಲಿ ದಲಿತರು, ಸವರ್ಣೀಯರು, ಹಿಂದುಳಿದ ಸಮಾಜದ ಜನತೆ – ಎಲ್ಲರೂ ಅನ್ಯೋನ್ಯವಾಗಿ ಬಾಳ್ವೆ ನಡೆಸಿದ್ದಾರೆ. ಇದು ರಾಜ್ಯದಲ್ಲೇ ಒಂದು ವಿಶಿಷ್ಟ ಬೆಳವಣಿಗೆ. ಶಾಂತಿ ಸೌಹಾರ್ದದ ವಾತಾವರಣದ ಸ್ಥಿತಿಯೇ ಮಹದೇವಪುರದ ವೈಶಿಷ್ಟ್ಯ. ರಸ್ತೆ ಕ್ರಾಂತಿ ರಸ್ತೆಗಳ ವಿಷಯವನ್ನು ಮರೆಯಲು ಸಾಧ್ಯವೆ? ಅತಿ ಪ್ರಮುಖ ಲಿಂಕ್ ರಸ್ತೆಗಳ ಅಭಿವೃದ್ಧಿಯಿಂದ ಜನತೆಯ… Continue Reading
- ಸಾಮಾಜಿಕ ಅಭ್ಯುದಯದ ದೃಢ ಹೆಜ್ಜೆಗಳು – Firm steps in Social development. - ಯುವಕರಿಗೆ ಕೆಲಸ ದೊರಕಿಸಲು ಉದ್ಯೋಗ ಮೇಳ, ಸಾರ್ವಜನಿಕ ಬಳಕೆಗಾಗಿ ಹಲವೆಡೆ ಸಮುದಾಯ ಭವನಗಳು, ಸುರಕ್ಷತೆಗಾಗಿ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ, ಸುಸಜ್ಜಿತ ವಿದ್ಯುತ್ ಚಿತಾಗಾರ, ದುರ್ಬಲರು, ಅಶಿಕ್ಷಿತರಿಗೆ ವಿವಿಧ ಬಗೆಯ ತರಬೇತಿಗಳು, ಅಂಬೇಡ್ಕರ್ ಭವನಗಳು, ಶಿಕ್ಷಣ ನೀಡಲು ವಿವಿಧ ಶಾಲಾ-ಕಾಲೇಜುಗಳು, ನೀರು ಸಂಗ್ರಹಕ್ಕೆ ಟ್ಯಾಂಕ್ಗಳು, ವಿಧವಾ-ವೃದ್ಧಾಪ್ಯ ವೇತನಗಳು, ಶಾಸಕರ ಅನುದಾನದಿಂದ ವಿವಿಧ ಕಾಮಗಾರಿಗಳು – ಒಂದೆ, ಎರಡೆ? ಅರವಿಂದ ಲಿಂಬಾವಳಿಯವರು ಕ್ಷೇತ್ರದ ಸಾಮಾಜಿಕ ಅಭಿವೃದ್ಧಿಗಾಗಿ ಹಲವು ಆಯಾಮಗಳಲ್ಲಿ ಕೆಲಸ ಮಾಡಿದ್ದಾರೆ. ನಿಜವಾದ ಸರ್ವಸ್ಪರ್ಶಿ ಅಭ್ಯುದಯ ಚಿಂತನೆ ಎಂದರೆ… Continue Reading
- ಅಪಾರ್ಟ್ಮೆಂಟ್ ನಿವಾಸಿಗಳ ಬವಣೆ ಪರಿಹಾರ – Apartment residents’ problems solved - ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಅಪಾರ್ಟ್ಮೆಂಟ್ಗಳಿವೆ. ಇಲ್ಲಿನ ನಿವಾಸಿಗಳು ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್ ಸ್ಥಾಪಿಸಿಕೊಂಡಿದ್ದಾರೆ. ಅರವಿಂದ ಲಿಂಬಾವಳಿಯವರ ಬಳಿ ಅವರು ಹಲವು ಸಮಸ್ಯೆಗಳ ಬಗ್ಗೆ ನಿವೇದಿಸಿಕೊಂಡಿದ್ದರು. ಅವುಗಳಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರಕಿದೆ. ಅಲ್ಲದೆ ಹಲವೆಡೆ ಬೀದಿ ನಾಯಿಗಳ ಹಾವಳಿಯನ್ನೂ ತಪ್ಪಿಸಲಾಗಿದೆ. ಮುಖ್ಯವಾಗಿ ಅಪಾರ್ಟ್ಮೆಂಟ್ಗಳ ಸುತ್ತಮುತ್ತ ಬೇಕಾಗಿದ್ದ ಬೀದಿ ದೀಪಗಳನ್ನು ಸ್ಥಾಪಿಸಲಾಗಿದೆ. ಇದರಿಂದ ನಿವಾಸಿಗಳು ಯಾವ ಭಯವೂ ಇಲ್ಲದೆ ರಾತ್ರಿಯ ಹೊತ್ತು ಸಂಚರಿಸಬಹುದು. ಇದಲ್ಲದೆ ಹಲವು ನಿವಾಸಿಗಳಿಗೆ ಮನೆ ಖರೀದಿ ಮಾಡಿದ್ದರೂ ದೊರಕದೇ ಹೋಗಿದ್ದ ಖಾತಾಪತ್ರಗಳನ್ನು ಅರವಿಂದ… Continue Reading
- ಇಪಿಐಪಿ ಅಭಿವೃದ್ಧಿಯ ಯಶೋಗಾಥೆ – EPIP : A saga of Development - ವೈಟ್ಫೀಲ್ಡ್ನ ಇಪಿಐಪಿ ವಲಯದಲ್ಲಿ ರಸ್ತೆ, ಮಳೆ ನೀರು ಕೊಯ್ಲು, ಕಾಲುದಾರಿ ಸುಧಾರಣೆ ಮತ್ತು ಡಾಂಬರೀಕರಣದ ಕೆಲಸಗಳು ಭರದಿಂದ ಸಾಗಿವೆ. ಇಲ್ಲಿನ ನಾಲ್ಕು ಸಾಲಿನ (೪ ಲೇನ್) ೫.೫ ಕಿಮೀ ಉದ್ದದ ಆಂತರಿಕ ಹೆದ್ದಾರಿಯನ್ನು ಅಸ್ಫಾಲ್ಟ್ ಮಾಡುವ ಕೆಲಸಕ್ಕೆ ೧೬.೪೦ ಕೋಟಿ ರೂ.ಗಳ ಬಿಡುಗಡೆಯಾಗಿದ್ದು ಕಾಮಗಾರಿಯು ಪ್ರಗತಿಯಲ್ಲಿದೆ. ಹಾಗೆಯೇ ಇಲ್ಲಿ ೪.೫೦ ಕಿಮೀ ಉದ್ದದ ೨ ಸಾಲಿನ (೨ ಲೇನ್) ಆಂತರಿಕ ಹೆದ್ದಾರಿಯ ಕಾಮಗಾರಿಯೂ ಪ್ರಗತಿಯಲ್ಲಿದೆ. ಇಪಿಐಪಿ ವಲಯದ ಬಳಿ ಇರುವ ಗ್ರಾಫೈಟ್ ಇಂಡಿಯಾ ಜಂಕ್ಷನ್ನಲ್ಲಿ ದ್ವಿಮುಖ ಸಂಚಾರದ… Continue Reading
- ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ – Improvement in Transport system - ಕಳೆದ ನಾಲ್ಕು ವರ್ಷಗಳಲ್ಲಿ ಮಹದೇವಪುರದ ಸಾರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ರೂಪಾಂತರಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಮಹದೇವಪುರಕ್ಕೆ ಪ್ರತಿ ನಿಮಿಷಕ್ಕೆ ಒಂದರಂತೆ ವೋಲ್ವೋ ಬಸ್ (ಸಂಖ್ಯೆ ೩೩೫ಇ) ಸೌಕರ್ಯವನ್ನು ಒದಗಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಬೆಂಗಳೂರು ನಗರಕ್ಕೆ ಬಂದು ಹೋಗಬಹುದು. ಇಪಿಐಪಿ ಪ್ರದೇಶದಲ್ಲಿ ೩೬ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಟಿಟಿಎಂಸಿ ಬಸ್ ನಿಲ್ದಾಣವನ್ನು ಸ್ಥಾಪಿಸಲಾಗಿದೆ. ಕೊಡತಿ ಮತ್ತು ಗುಂಜೂರಿನಲ್ಲಿ ಹೊಸದಾಗಿ ಬಸ್ ಡಿಪೋಗಳನ್ನು ನಿರ್ಮಿಸಲಾಗಿದೆ. ಈ ಡಿಪೋಗಳು ಸದ್ಯದಲ್ಲೇ ಕಾರ್ಯಾಚರಿಸಲಿವೆ. ಗ್ರಾಮೀಣ ಭಾಗಕ್ಕೂ… Continue Reading
- ಆರೋಗ್ಯಕ್ಕೆ ಆದ್ಯತೆ – Priority to Health - ಈಗ ಆರೋಗ್ಯ ಸಚಿವರಾಗಿರುವ ಅರವಿಂದ ಲಿಂಬಾವಳಿಯವರು ಮಹದೇವಪುರದ ಶಾಸಕರಾದ ಕ್ಷಣದಿಂದಲೂ ಸ್ವಾಸ್ಥ್ಯವನ್ನು ಅತ್ಯಂತ ಜತನದಿಂದ ನೋಡಿಕೊಂಡಿದ್ದಾರೆ. ಎರಡು ಮೆಗಾ ಹೆಲ್ತ್ ಕ್ಯಾಂಪ್ಗಳೂ ಸೇರಿದಂತೆ ಆರು ವೈದ್ಯಕೀಯ ಶಿಬಿರಗಳು ನಡೆದಿವೆ. ವರ್ತೂರಿನಲ್ಲಿ ನಡೆದ ಮೊದಲ ಮೆಗಾ ಹೆಲ್ತ್ ಕ್ಯಾಂಪಿನಲ್ಲಿ ೧೩೭೦೦ ರೋಗಿಗಳನ್ನು ಉಚಿತ ಬಸ್ ವ್ಯವಸ್ಥೆಯ ಮೂಲಕ ಕರೆತಂದು ಎರಡು ದಿನ ಊಟದ ವ್ಯವಸ್ಥೆಯನ್ನೂ ಮಾಡಿ, ಹತ್ತು ದಿನಗಳಿಗಾಗುವಷ್ಟು ಔಷಧಗಳನ್ನೂ ಉಚಿತವಾಗಿ ನೀಡಿದ ಅಗ್ಗಳಿಕೆ ಅರವಿಂದ ಲಿಂಬಾವಳಿಯವರ ಸಂಘಟನಾ ಸಾಮರ್ಥ್ಯಕ್ಕೆ ದೊರಕುವ ನಿದರ್ಶನ. ಇತ್ತೀಚೆಗಷ್ಟೆ ಕಾಡುಗೋಡಿಯಲ್ಲಿ ಎರಡನೇ ಬೃಹತ್… Continue Reading
- ಅಕ್ಷರ ಕ್ರಾಂತಿಯ ಹೊಸ ಅಧ್ಯಾಯ – Revolution in the field of Education: A novel experiment - ಅರವಿಂದ ಲಿಂಬಾವಳಿ ಶಿಕ್ಷಣ ರಂಗದಲ್ಲೇ ಹೋರಾಟ ಮಾಡುತ್ತಲೇ ಬೆಳೆದ ಯುವ ನಾಯಕರು. ಶಾಸಕರಾದ ಮೇಲೆ ಮಹದೇವಪುರದಲ್ಲಿ ಶಿಕ್ಷಣ ಕ್ರಾಂತಿಗೆ ಅವರು ಮಾಡಿದ ಯತ್ನಗಳನ್ನು ಕಣ್ಣಾರೆ ಕಾಣಬಹುದು. ವರ್ತೂರು ಮತ್ತು ಕಾಡುಗೋಡಿ – ಒಟ್ಟು ಎರಡು ಪದವಿ ಕಾಲೇಜುಗಳು ಕ್ಷೇತ್ರಕ್ಕೆ ಬಂದಿವೆ. ಬೆಂಗಳೂರಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಎಂದರೆ ಎಸ್ ಜೆ ಪಾಲಿಟೆಕ್ನಿಕ್ ಮಾತ್ರ ಎಂದೇ ಮಾತಿರುವಾಗ ಕಾಡುಗೋಡಿ ವಾರ್ಡಿನ ಚನ್ನಸಂದ್ರ, ಹಗದೂರು ವಾರ್ಡಿನ ಇಮ್ಮಡಿಹಳ್ಳಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕೂಡಾ ಸ್ಥಾಪನೆಯಾಗಿವೆ. ಎಲ್ಲದಕ್ಕೂ ನಿವೇಶನಗಳೂ ಇವೆ; ಕಟ್ಟಡಗಳ ನಿರ್ಮಾಣ ಆರಂಭವಾಗಬೇಕಿದೆ.… Continue Reading
- ಮನೆಗೆ ದೀಪ, ಬೀದಿಗೆ ಬೆಳಕು – Lights to Houses as well to streets - ೨೦೦೮ರಲಿ ಮಹದೇವಪುರ ಕ್ಷೇತ್ರದ ಹಲವು ಪ್ರದೇಶಗಳು ಬೀದಿ ದೀಪಗಳಿಂದ ವಂಚಿತವಾಗಿದ್ದವು. ವಿದ್ಯುತ್ ಲೈನ್ಗಳೂ ಇಲ್ಲ, ಕಂಬಗಳೂ ಇಲ್ಲದಂಥ ಸ್ಥಿತಿ. ಅರವಿಂದ ಲಿಂಬಾವಳಿಯವರು ವಿದ್ಯುತ್ ಸಂಪರ್ಕ, ಬೀದಿ ದೀಪ, ಗುಣಮಟ್ಟದ ವಿದ್ಯುತ್, ಗ್ರಾಮೀಣ ಪ್ರದೇಶಕ್ಕೂ ನಗರಮಟ್ಟದ ವಿದ್ಯುತ್ – ಹೀಗೆ ಎಲ್ಲ ಅಗತ್ಯಗಳನ್ನೂ ಪೂರೈಸುವಲ್ಲಿ ಯಶ ಪಡೆದಿದ್ದಾರೆ. ಎಲ್ಲಾ ಪ್ರಮುಖ ರಸ್ತೆಗಳಲ್ಲಿ, ಗಲ್ಲಿ ರಸ್ತೆಗಳಲ್ಲಿ ಸಾರ್ವಜನಿಕರು ನಿರ್ಭಯವಾಗಿ ಸಂಚರಿಸಲು ಅನುಕೂಲವಾಗುವಂತೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಪ್ರಮುಖ ಬೀದಿಗಳಲ್ಲಿ ಎರಡೂ ಬದಿ ಚಾಚಿರುವ ಸೋಡಿಯಂ ದೀಪಗಳ ಸ್ತಂಭಗಳನ್ನು ಸ್ಥಾಪಿಸಿ ಎಲ್ಲ… Continue Reading